ಸಿಎಎ ವಿರುದ್ಧ, ಪರ ಧರಣಿ ವೇಳೆ ಬುಗಿಲೆದ್ದ ಹಿಂಸಾಚಾರ : ಸಾವಿನ ಸಂಖ್ಯೆ 9ಕ್ಕೆ ಏರಿಕೆ!

ಸಿಎಎ ವಿರುದ್ಧ ಪರ ಧರಣಿ ವೇಳೆ ಬುಗಿಲೆದ್ದ ಹಿಂಸಾಚಾರಕ್ಕೆ ಗಲಭೆಯಲ್ಲಿ 8 ಜನ ನಾಗರೀಕರು ಹಾಗೂ ಓರ್ವ ಪೇದೆ ಸಾವನ್ನಪ್ಪಿದ್ದು ದೆಹಲಿಯ 10 ಪ್ರದೇಶಗಳಲ್ಲಿ  144 ಸೆಕ್ಷನ್ ಜಾರಿ ಮಾಡಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ 13 ಪ್ಯಾರಾ ಮಿಲಿಟರಿ ಪಡೆ ಮತ್ತು 1 ಸಾವಿರ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದು ದುಷ್ಕರ್ಮಿಗಳು ಬಂದೂಕು ಹಿಡಿದುಕೊಂಡು ಕಂಡವರ ಮೇಲೆ ಹಲ್ಲೆ ಮಾಡಿ ದೃಶ್ಯಗಳು ಸೆರೆಯಾಗಿವೆ.

ದೆಹಲಿಯ ಭಜನ್‌ಪುರ, ಮೌಜ್‌ಪುರ ಮತ್ತು ಜಾಫರಾಬಾದ್​​ಗಳಲ್ಲಿ ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು, ಅದು ಭಾರೀ ಹಿಂಸಾಚಾರಕ್ಕೆ ತಿರುಗಿದೆ.

ಹಿಂಸಾಚಾರದ ವಿಡಿಯೋಗಳು ವೈರಲ್​ ಆಗಿವೆ. ವಾಹನ, ಆಟೋ ರಿಕ್ಷಾಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ ಇನ್ನೊಂದು ವಿಡಿಯೋದಲ್ಲಿ ಕೆಂಪು ಶರ್ಟ್​ ಹಾಕಿಕೊಂಡವನೋರ್ವ ಪೊಲೀಸರತ್ತ ಗನ್​ ತೋರಿಸುವುದನ್ನು ನೋಡಬಹುದು. ಪರಿಸ್ಥಿತಿ ನಿಯಂತ್ರಣದ ವೇಳೆ ಪೊಲೀಸ್​ ಮುಖ್ಯಪೇದೆಯೋರ್ವರು ಮೃತರಾಗಿದ್ದಾಗಿ ವರದಿಯಾಗಿದೆ.