ಏಳು ವರ್ಷಗಳಿಂದ ಕೋಮಾದಲ್ಲಿದ್ದ ಕಾಂಗ್ರೆಸ್‌ ನಾಯಕ ಪ್ರಿಯರಂಜನ್‌ ದಾಸ್‌ ಮುನ್ಷಿ ಇನ್ನಿಲ್ಲ

ದೆಹಲಿ : ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಿಯರಂಜನ್‌ ದಾಸ್ ಮುನ್ಷಿ ನಿಧನರಾಗಿದ್ದಾರೆ. ಎಂಟು ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು.

ಪ್ರಿಯರಂಜನ್‌ ದಾಸ್‌ ಮುನ್ಷಿ ಪಶ್ಚಿಮ ಬಂಗಾಳದ ರಾಯಗಂಜ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು, ಜೊತೆಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ, 1970-71ರಲ್ಲಿ ಪಶ್ಚಿಮ ಬಂಗಾಳ ಯೂತ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ಏಳು ವರ್ಷಗಳ ಹಿಂದೆ ಪ್ಯಾರಾಲಿಸಿಸ್‌ ಅಟ್ಯಾಕ್ ಆಗಿತ್ತು.

ಕಾಂಗ್ರೆಸ್‌ನ ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಕೆಲಸ ನಿರ್ವಹಿಸುವ ವೇಳೆ ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುತ್ತಿವೆ ಎಂಬ ಕಾರಣಕ್ಕೆ ಎಎಕ್ಸ್‌ಎನ್‌ ಮತ್ತು ಫ್ಯಾಷನ್‌ ಟಿವಿಗೆ ನಿಷೇಧ ವಿಧಿಸಿದ್ದರು.

ಮುನ್ಷಿ ಸಾವಿಗೆ ರಾಜಕೀಯ ದುರೀಣರು ಕಂಬನಿ ಮಿಡಿದಿದ್ದಾರೆ.

 

 

Leave a Reply

Your email address will not be published.