ನಿರ್ವಾಹಕನ ಕೈ ಮುರಿದ ಡಿಪೋ ಮ್ಯಾನೇಜರ್‌ : ರಜೆ ಕೇಳಿದ ಕಾರಣಕ್ಕೆ ಕಂಡಕ್ಟರ್‌ ಮೇಲೆ ಹಲ್ಲೆ…

ಧಾರವಾಡ : ರಜೆ ಕೇಳಿದ ಕಾರಣಕ್ಕೆ ಕೋಪಗೊಂಡ ಡಿಪೋ ಮ್ಯಾನೇಜರ‍್ ಬಸ್ ನಿರ್ವಾಹಕನ ಮೇಲೆ ದರ್ಪ ತೋರಿಸಿದ್ದಲ್ಲದೆ, ಲಾಠಿ ಬೀಸಿರುವ ಪರಿಣಾಮ ಆತನ ಬಲಗೈ ಮುರಿದು ಹೋಗಿರುವ ಘಟನೆ ಕಾರ್ಮಿಕರ ದಿನವಾದ ಮೇ 1ರಂದು ಧಾರವಾಡದ ಡಿಪೋದಲ್ಲಿ ನಡೆದಿದೆ. ಹಲ್ಲೆಗೊಳಗಾದ ಕಂಡಕ್ಟರ್‌ ಮಂಜುನಾಥ ಹುಕ್ಕೇರಿ ಎಂಬುವವರಾಗಿದ್ದು, ಡಿಪೋ ಮ್ಯಾನೇಜರ್‌ ದೀಪಕ್‌ ಜಾಧವ್‌ ಈತನ ಮೇಲೆ ಹಲ್ಲೆ ನಡೆಸಿದ್ದಾನೆ.
ಗಾಯಗೊಂಡ ಮಂಜುನಾಥ್‌ರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಈ ಮಧ್ಯೆ ಹಲ್ಲೆ ಮಾಡಿದ ಡಿಪೋ ಮ್ಯಾನೇಜರ್  ಮೇಲೆ ಕ್ರಮ ಕೈಗೊಳದಿದ್ದರೆ ನಾಳೆ ಎಲ್ಲಾ ಬಸ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಸಾರಿಗೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.⁠⁠⁠⁠

Comments are closed.