ಮಹದಾಯಿ ಹೋರಾಟಗಾರರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು

ಧಾರವಾಾಡ : ನಿನ್ನೆ ನವಲಗುಂದ ಪಟ್ಟಣದಲ್ಲಿ ದಿಢೀರ್ ರಸ್ತೆ ತಡೆ ಮಾಡಿದ್ದ ಹೋರಾಟಗಾರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಅಮಿತ್ ಶಾ ಭೇಟಿಗೆ ಅವಕಾಶ ನೀಡದ್ದಕ್ಕೆ ಹಾಗೂ ಮಹದಾಯಿ ಕುರಿತ ಸರ್ವಪಕ್ಷಗಳ ಸಭೆಗೆ ಆಹ್ವಾನ ನೀಡದ್ದಕ್ಕೆ ನಿನ್ನೆ ಪ್ರತಿಭಟನೆ ನಡೆದಿದ್ದು, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದದಲ್ಲಿ ಶಾಂತತೆಗೆ ಭಂಗ ತಂದಿದ್ದಲ್ಲದೇ ತಿಳಿವಳಿಕೆ ಹೇಳಲು ಹೋದ ಪೊಲೀಸರಿಗೇ ಅವಾಚ್ಯ ಪದಗಳಿಂದ ಬೈದಿದ್ದರು. ಈ ಹಿನ್ನೆಲೆಯಲ್ಲಿ, ಮಹದಾಯಿ‌ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ, ಸುಭಾಶ್‌ಚಂದ್ರಗೌಡ ಪಾಟೀಲ ಸೇರಿ 12 ಜನರ ವಿರುದ್ದ ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.