ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿದಿದ್ದ ಧವನ್, ಬುಮ್ರಾ ರೀ ಎಂಟ್ರಿ

ದೈಹಿಕ ಸಕ್ಷಮತೆಯ ಕೊರತೆಯ ಕಾರಣ ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿದಿದ್ದ ಆರಂಭಿಕ ಶಿಖರ್ ಧವನ್ ಹಾಗೂ ಮಧ್ಯಮ ವೇಗಿ ಜಸ್ಪ್ರೀತ್ ಬುಮ್ರಾ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಶ್ರೀಲಂಕಾ ವಿರುದ್ಧದ t-೨೦ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ್ದು, ಶಿಖರ್ ಧವನ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗೆ ಮಣೆ ಹಾಕಿದೆ.

ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಚುಟುಕು ಕ್ರಿಕೆಟ್ ಣ/೨೦ ಸರಣಿಗೆ ರೋಹಿತ್ ರ‍್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಶಿಖರ್‍ ಧವನ್ ಅವರು ರ‍್ನಾಟಕದ ಲೋಕೇಶ್ ರಾಹುಲ್ ಸಂಗಡ ಸರದಿ ಆರಂಭಿಸಲಿದ್ದಾರೆ.

ಇದೇ ವೇಳೆ ಶಿಖರ್‍ ಧವನ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಕನ್ನಡಿಗ ಮಾಯಂಕ್ ಅಗರ್‍ವಾಲ್ ಧವನ್ ವಾಪಸಾತಿಯೊಂದಿಗೆ ತಂಡದಿಮದ ಹೊರಬಿದ್ದಿದ್ದಾರೆ. ಅವರನ್ನು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ತಂಡದಲ್ಲಿ ಸೇರಿಸಲಾಗಿದೆ.

ಶ್ರೀಲಂಕಾ ವಿರುದ್ಧದ ಟಿ೨೦ ಪಂದ್ಯಗಳಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಸ್ಯಾಮ್ಸನ್, ಪಂತ್, ಶಿವಮ್ ದುಬೇ, ಚಾಹಲ್, ಕುಲದೀಪ್, ಜಡೇಜಾ, ಶರ‍್ದೂಲ್, ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ ಮತ್ತು ವಾಷಿಂಗ್ಟನ್ ಸುಂದರ್.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ರ‍್ಮಾ(ಉಪನಾಯಕ), ಧವನ್, ರಾಹುಲ್, ಅಯ್ಯರ್, ಪಾಂಡೆ, ಜಾಧವ್, ಪಂತ್, ಶಿವಮ್ ದುಬೇ, ಜಡೇಜಾ, ಚಾಹಲ್, ಕುಲದೀಪ್, ನವದೀಪ್ ಸೈನಿ, ಬುಮ್ರಾ, ಶರ‍್ದೂಲ್ ಮತ್ತು ಮೊಹಮ್ಮದ್ ಶಮಿ.