ದಿನೇಶ್ ಗುಂಡೂರಾವ್ ಅನಂತ್ ಕುಮಾರ್ ಹೆಗಡೆ ನಡುವೆ ವೈಯಕ್ತಿಕ ವಿಚಾರದಲ್ಲಿ ಕೆಸೆರೆರೆಚಾಟ

ಪ್ರಧಾನಿ ನರೇಂದ್ರ ಮೋದಿ ವಹಿಸಿರುವ ಇಲಾಖೆಯ ನಿರ್ವಹಣೆಗಿಂತ, ವಿವಾದಕಾರಿ ಹೇಳಿಕೆ ನೀಡಿಯೇ ಸುದ್ದಿಯಲ್ಲಿರುವ ಕೇಂದ್ರ ಸಚಿವ ಮತ್ತು ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ವೈಯಕ್ತಿಕ ಆರೋಪ ಮಾಡಿದ್ದಾರೆ. ‘ಕೇಂದ್ರ ಸಚಿವರಾಗಿ ನಿಮ್ಮ ಸಾಧನೆ ಏನು’ ಎಂದು ಟ್ವೀಟ್ ಮಾಡಿದ ದಿನೇಶ್ ಗುಂಡೂರಾವ್ ಅವರಿಗೆ ಟ್ವಿಟ್ಟರ್ ಮೂಲಕವೇ ಉತ್ತರಿಸಿರುವ ಅನಂತ್ ಕುಮಾರ್ ಹೆಗಡೆ, ಮುಸ್ಲಿಂ ಮಹಿಳೆಯ ವಿರುದ್ದ ಓಡಿ ಹೋದ ವ್ಯಕ್ತಿ ಎಂದು ತಿರುಗೇಟು ನೀಡಿದ್ದಾರೆ.

ನಿಮ್ಮ ರಾಜಕೀಯ ಕೆಸೆರೆರೆಚಾಟಕ್ಕೆ ಮನೆಯವರನ್ನು ಯಾಕೆ ತರುತ್ತೀರಾ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಟ್ವಿಟ್ಟಿಗರು ನೀತಿಪಾಠ ಬೋಧಿಸಿದ್ದಾರೆ.

ನಾವು ನಮ್ಮ ಸಮಾಜದ ಆದ್ಯತೆಯ ಬಗ್ಗೆ ಯೋಚಿಸಬೇಕು. ಜಾತಿಯ ಬಗ್ಗೆ ಯೋಚಿಸಬೇಕು. ಅಕಸ್ಮಾತ್ ಒಬ್ಬ ಹಿಂದು ಮಹಿಳೆಯನ್ನು ಯಾರಾದರೂ ಮುಟ್ಟಿದರೆ… ಮುಟ್ಟಿದ ಕೈ ಅಸ್ತಿತ್ವದಲ್ಲೇ ಇರಬಾರದು ಎನ್ನುವ ವಿವಾದಕಾರಿ ಹೇಳಿಕೆಯನ್ನು ಒಂದು ದಿನದ ಹಿಂದೆ ಮಡಿಕೇರಿಯಲ್ಲಿ ಹೆಗಡೆ ನೀಡಿದ್ದರು.

ದಿನೇಶ್ ಗುಂಡೂರಾವ್ ವೈಯಕ್ತಿಕ ವಿಚಾರ ಅನಂತ್ ಕುಮಾರ್ ಹೆಗಡೆ ಮಡಿಕೇರಿಯಲ್ಲಿ ನೀಡಿದ ಹೇಳಿಕೆಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ‘ಕೇಂದ್ರ ಸಚಿವರಾಗಿ ಮತ್ತು ಸಂಸದರಾಗಿ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು? ಇಂತವರು, ಸಂಸದರು ಅಥವಾ ಕೇಂದ್ರ ಸಚಿವರಾಗುವುದು ಮತ್ತು ಸಂಸದರಾಗಿ ಮತ್ತೆ ಆಯ್ಕೆಯಾಗುವುದು ಶೋಚನೀಯ’ ಎಂದು ದಿನೇಶ್ ಟ್ವೀಟ್ ಮಾಡಿದ್ದರು.

ಮುಸ್ಲಿಂ ಮಹಿಳೆಯ ವಿರುದ್ದ ಓಡಿದ್ದು ಇದಕ್ಕೆ ಟ್ವಿಟ್ಟರ್ ನಲ್ಲೇ ಉತ್ತರಿಸಿದ ಅನಂತ್ ಕುಮಾರ್ ಹೆಗಡೆ, ಆ ವ್ಯಕ್ತಿ (ದಿನೇಶ್ ಗುಂಡೂರಾವ್) ಕೇಳಿದ ಪ್ರಶ್ನೆಗೆ ಖಂಡಿತವಾಗಿಯೇ ನಾನು ಉತ್ತರಿಸುತ್ತೇನೆ. ಇದಕ್ಕೂ ಮೊದಲು, ತಮ್ಮ ರಾಜಕೀಯ ಜೀವನದಲ್ಲಿ ಅವರ ಸಾಧನೆ ಏನು ಎನ್ನುವುದನ್ನು ಸ್ಪಷ್ಟ ಪಡಿಸಲಿ. ಅವರ ಬಗ್ಗೆ ಗೊತ್ತಿರುವುದು ನನಗೆ ಒಂದೇ, ಅದು ಮುಸ್ಲಿಂ ಮಹಿಳೆಯ ಹಿಂದೆ ಓಡಿ ಹೋಗಿದ್ದು ಎಂದು ಹೆಗಡೆ ತಿರುಗೇಟು ನೀಡಿದ್ದಾರೆ. ದಿನೇಶ್ ಪತ್ನಿಯ ಹೆಸರು ತಬಸ್ಸುಂ ರಾವ್.

ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಓರ್ವ ಗಣ್ಯ ವ್ಯಕ್ತಿಯಾಗಿ ಹೆಗಡೆ ಹೇಳಿಕೆಗೆ ಮತ್ತೆ ಖಾರವಾಗಿ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಅನಂತ್ ಕುಮಾರ್ ಹೆಗಡೆ ವೈಯಕ್ತಿಕ ವಿಚಾರವನ್ನು ಇಟ್ಟುಕೊಂಡು ಈ ಮಟ್ಟಕ್ಕೆ ಇಳಿದದ್ದು ನೋವು ತರುವಂತದ್ದು. ಇದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ. ಕೇಂದ್ರ ಸಚಿವರಿಗೆ ಹಿಂದೂ ಧರ್ಮದ ಜ್ಞಾನ ಇಲ್ಲ ಎಂಬುವುದು ತಿಳಿಯುತ್ತದೆ. ಇನ್ನು ಸಮಯ ಮೀರಿಲ್ಲ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಓರ್ವ ಗಣ್ಯ ವ್ಯಕ್ತಿಯಾಗಲು ಪ್ರಯತ್ನಿಸಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಾಲಗೆ ಕುಲವನ್ನು ಹೇಳುತ್ತದೆ ಅನಂತ್ ಕುಮಾರ್ ಹೆಗಡೆ ಟ್ವೀಟಿಗೆ ತುಂಬಾ ವಿರೋಧ ವ್ಯಕ್ತವಾಗಿದೆ. ನಾಲಿಗೆ ಕುಲವನ್ನು ಹೇಳುತ್ತದೆ. ಸುಬ್ರಮಣಿಯನ್ ಸ್ವಾಮಿ ಮಗಳು ಮುಸ್ಲಿಂ ಹುಡುಗಿಯನ್ನು ಮದುವೆಯಾಗಲಿಲ್ಲವೇ? ಪ್ರವೀಣ್ ತೊಗಾಡಿಯಾ ಮಗಳೂ ಅದೇ ಮಾಡಿದ್ದು. ಜನನಾಯಕರಾದ ನೀವು ಸಂಯಮದಿಂದ ವರ್ತಿಸಿ ಎಂದು ಟ್ವಿಟ್ಟಿಗರು ಹೆಗಡೆಗೆ ಬುದ್ದಿವಾದ ಹೇಳಿದ್ದಾರೆ.

ಶೋಭಾ ಕರಂದ್ಲಾಜೆ ವರ್ಸಸ್ ದಿನೇಶ್ ಗುಂಡೂರಾವ್ ಈ ಹಿಂದೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ದಿನೇಶ್ ಗುಂಡೂರಾವ್ ದಲಿತರ ಮನೆಯಿಂದ ಹೆಣ್ಣು ತಂದಿದ್ದಾರಾ? ಅವರು ಯಾರನ್ನು ಮದುವೆಯಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು ಎನ್ನುವ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ಉತ್ತರಿಸಿದ್ದ ದಿನೇಶ್, ಶೋಭಾ ಅವರಿಗೆ ಇನ್ನೂ ವಯಸ್ಸಿದೆ, ಅವರೇಕೆ, ದಲಿತರ ಹುಡುಗನನ್ನು ಮದುವೆಯಾಗಬಾರದು ಎಂದು ತಿರುಗೇಟು ನೀಡಿದ್ದರು.

Leave a Reply

Your email address will not be published.