ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥ – ಸಚಿವ ಸಿ.ಟಿ.ರವಿ

ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥ ಮಾಡುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ತತ್ವ ಬದ್ಧ ಹೋರಾಟವಾಗಿದೆ. ಈ ಬಾರಿ ದತ್ತಪೀಠ ವಿವಾದ ಇತ್ಯರ್ಥ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.

ಬಹಳ ವರ್ಷದ ಪರಿಶ್ರಮ-ಸಂಕಲ್ಪ, ಭಕ್ತಿ-ಶಕ್ತಿಯ ಆಂಧೋಲನ ಅಯೋಧ್ಯೆ ಮಾದರಿಯಲ್ಲಿ ಗುರಿ ಮುಟ್ಟುವ ವಿಶ್ವಾಸ ನನಗಿದೆ, ಇದೊಂದು ನ್ಯಾಯ ಹಾಗೂ ತತ್ವಬದ್ಧವಾದ ಹೋರಾಟವಾಗಿದ್ದು, ದತ್ತಪೀಠದ ತೀರ್ಪು ನಮ್ಮಂತೆಯೇ ಬರುತ್ತೆಂದು ದತ್ತಮಾಲಾಧಾರಿ ಹಾಗೂ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಮಾಲಾಧಾರಿಯಾಗಿ ಇಂದು ನಗರದ ನಾರಾಯಣಪುರದಲ್ಲಿ ಮನೆಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ ಬಳಿಕ ಮಾತನಾಡಿದ ಅವ್ರು, ಭಕ್ತಿ-ಭಾವದ ಸಮ್ಮಿಲನೊಂದಿಗೆ ದತ್ತಪೀಠಕ್ಕೆ ಹೋಗ್ತಿದ್ದೇವೆ ಎಂದಿದ್ದಾರೆ.

ಇದೇ ವೇಳೆ, ದತ್ತಾತ್ರೇಯನಿಗೆ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಜೆಡಿಎಸ್ ದಲಿತ ಅರ್ಚಕರನ್ನ ನೇಮಕ ಮಾಡಲಿ ಎಂಬ ಆಗ್ರಹಕ್ಕೆ, ದತ್ತನಿಗೆ ಮಡಿ ಹಾಗೂ ಜಾತಿಭೇದ ಇಲ್ಲದಾಗ, ಅರ್ಚಕರಲ್ಲಿ ಮಡಿ-ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ಯಾರೇ ಅರ್ಚಕರಾದ್ರು ಸರಿ. ಹಿಂದೂ ಅರ್ಚಕರು ನೇಮಕವಾಗಿ, ಹಿಂದೂ ಪದ್ದತಿ ಪ್ರಕಾರ ಪೂಜೆಯಾಗಬೇಕು ಅನ್ನೋದಷ್ಟೆ ನಮ್ಮ ಬೇಡಿಕೆ. ದಲಿತ ಅಥವ ವೇಧ-ಆಗಮನ ಕಲಿತ ಯಾರೇ ಅರ್ಚಕರಾದ್ರು ಅದನ್ನ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಕಡೆಗೂ ಜೆಡಿಎಸ್ ತನ್ನ ನಿಲುವು ಬದಲಿಸಿಕೊಂಡು ಅರ್ಚಕರ ನೇಮಕಕ್ಕೆ ಒತ್ತಾಸೆಯಾಗಿ ನಿಂತು, ಬಹುಕಾಲದ ದತ್ತಪೀಠ ಮುಕ್ತಿಯ ಹೋರಾಟಕ್ಕೆ ತಾವು ಬೆಂಬಲಿಸುವಂತೆ ಸಹಕರಿಸಿರೋದನ್ನ ನಾನೂ ಬೆಂಬಿಲಿಸ್ತೇನೆ ಎಂದಿದ್ದಾರೆ. ಸಚಿವ ಸಿ.ಟಿ.ರವಿ ದತ್ತಪೀಠದ ಹೋರಾಟವನ್ನ ರಾಜಕೀಯಕ್ಕೆ ಬಳಿಸಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೇ ನೀಡಿದ ಸಿ.ಟಿ. ರವಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ತನ್ನನ್ನ ತಾನು ತೊಡಗಿಸಿಕೊಂಡಾಗ ನಾನು ಯಾವುದೇ ಪಕ್ಷದ ಸದಸ್ಯನೂ ಆಗಿರಲಿಲ್ಲ ಎಂದು ಆರೋಪಿತರಿಗೆ ತಿರುಗೇಟು ನೀಡಿದ್ದಾರೆ.

Leave a Reply