ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್ ಗೆ ಬೇಡ – ಕೋರ್ಟ್ ಸಲಹೆ ಸ್ವಾಗತಿಸಿದ ಸೀತಾರಾಂ

ಶಾಸಕರನ್ನು ಅನರ್ಹಗೊಳಿಸೋ ಅಧಿಕಾರ ಸ್ಪೀಕರ್ ಗೆ ಬೇಡ ಎಂಬ ಕುರಿತು ಸುಪ್ರೀಂ ಕೋರ್ಟ್ ಸಲಹೆಯನ್ನು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸ್ವಾಗತಿಸಿದ್ದಾರೆ. ಪೌರತ್ವ ಮಸೂದೆ ಜಾರಿ ಮೂಲಕ ಬಿಜೆಪಿ ವೋಟ್ ಬ್ಯಾಂಕ್ ನೀತಿ ಅನುಸರಿಸುತ್ತಿರೋದಾಗಿ ಕಿಡಿಕಾರಿದ್ದಾರೆ. ಪೌರತ್ವ ವಿರುದ್ಧ ದೇಶಾದ್ಯಂತ ಅಸಹಾಕಾರ ಚಳುವಳಿ ನಡೆಸೋದಾಗಿ ಎಚ್ಚರಿಸಿದ್ದಾರೆ.

ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಗೆ ಬೇಡ ಎನ್ನುವ ಕುರಿತು ಸುಪ್ರೀಂ ಕೋರ್ಟ್ ಸಲಹೆಯನ್ನು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸ್ವಾಗತಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಿಪಿಐಎಂ ಪಕ್ಷದ ನಿಲುವೂ ಅದೇ ಇದೆ ಎಂದರು.

ಶಾಸಕರ ಅನರ್ಹತೆ ಮಾಡೋ ಅಧಿಕಾರಾನ ಸ್ಪೀಕರ್ ಗೆ ನೀಡಬಾರದು. ತಮ್ಮ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಕಾರ್ಯನಿರ್ವಹಿಸೋ ಸಾಧ್ಯತೆ ಇರುತ್ತೆ. ಸ್ಪೀಕರ್ ಗೆ ಅಧಿಕಾರ ನೀಡಬಾರದೆಂದು ಸಂಸತ್ ನಲ್ಲಿ ಈ ಹಿಂದೆ ನಾನು ಒತ್ತಾಯಿಸಿದ್ದೆ. ಸುಪ್ರೀಂ ಕೋರ್ಟ್ ಹೇಳಿದಂತೆ ಸ್ವತಂತ್ರ ವ್ಯವಸ್ಥೆಯೊಂದನ್ನು ಜಾರಿಗೆ ತರೋ ಅವಶ್ಯವಿದೆ. ಸುಪ್ರೀಂ ಕೋರ್ಟ್ ಸಲಹೆಯನ್ನು ಸ್ವಾಗತಿಸುತ್ತೇನೆ ಎಂದು ಸೀತಾರಾಂ ಯೆಚೂರಿ ತಿಳಿಸಿದ್ದಾರೆ.

ಪೌರತ್ವದ ವಿರುದ್ಧ ಅಸಹಾಕಾರ ಚಳುವಳಿ….
ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಅಸಹಾಕಾರ ಚಳುವಳಿ ನಡೆಸೋದಾಗಿ ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಸಂದರ್ಶನ ನೀಡಿದ ಸೀತಾರಾಂ ಯೆಚೂರಿ, ಗೃಹ ಸಚಿವ ಅಮಿತ್ ಶಾ ಬ್ರಿಟೀಷರ ರೀತಿಯಲ್ಲಿ ವರ್ತಿಸ್ತಿದಾರೆ. ಪೌರತ್ವ ಮಸೂದೆ ಜಾರಿಗೆ ತಂದೇ ತರ್ತೀವಿ ಆಂತಾರೆ, ಆದ್ರೆ ಈ ದೇಶ ಬಿಡಲ್ಲ ಎಂದ ಬ್ರಿಟೀಷರೇ ಗಾಂಧೀಜಿಯ ಅಸಹಾಕಾರ ಚಳುವಳಿಗೆ ಬೆಚ್ಚಿ ಭಾರತ ಬಿಟ್ಟರು. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟರು. ಹಾಗೆಯೇ ಕೇಂದ್ರ ಸರ್ಕಾರ ಜನರ ಚಳುವಳಿಗೆ ಮಣಿದು ಪೌರತ್ವ ಮೂಸದೆ ವಾಪಸ್ ಪಡೆಯುತ್ತೆ.

ನಾಳೆಯಿಂದಲೇ ದೇಶಾದ್ಯಂತ ವಿವಿಧ ಹಂತಗಳಲ್ಲಿ ಹೋರಾಟ ಆರಂಭಿಸ್ತೇವೆ. ಜನವರಿ 26 ರಂದು ದೇಶಾದ್ಯಂತ ಸಂವಿಧಾನ ಓದಿ, ಅದರ ಮೇಲೆ ಪ್ರಮಾಣ ಮಾಡ್ತೇವೆ. ಗಾಂಧೀಜಿ ಹತ್ಯೆಯಾದ ದಿನ ಜನವರಿ 30ಕ್ಕೆ ದೇಶಾದ್ಯಂತ ಶಾಂತಿಯುತ ಹೋರಾಟ ನಡೆಯುತ್ತೆ. ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ಪೌರತ್ವ ಮಸೂದೆ ಕುರಿತು ವಿಚಾರಣೆ ಆರಂಭಗೊಂಡಿದೆ. ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದ್ದು, ಇದು ಒಳ್ಳೆಯ ಬೆಳವಣಿಗೆ. ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ಪೌರತ್ವ ಮಸೂದೆ ವಿರುದ್ಧ ನಿರ್ಣಯ ಕೈಗೊಂಡಿವೆ. ಅದರಂತೆ ಇತರೆ ರಾಜ್ಯಗಳೂ ನಿರ್ಣ ಕೈಗೊಂಡು ಪೌರತ್ವ ಮಸೂದೆ ಧಿಕ್ಕರಿಸಬೇಕು. ಪೌರತ್ವ ಮಸೂದೆ ಹಿಂಪಡೆಯೋವರೆಗೂ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತೆ ಎಂದು ಸೀತಾರಾಂ ಯೆಚೂರಿ ತಿಳಿಸಿದ್ದಾರೆ.

ಸಂಸತ್ ನಲ್ಲಿ ಅಂಗೀಕಾರವಾದ ಕೂಡ್ಲೇ ಒಪ್ಪಲೇಬೇಕೆಂದಿಲ್ಲ….
ಸಂಸತ್ ನಲ್ಲಿ ಅಂಗೀಕರಿಸಿದ್ದಾರೆ ಎಂದ ಕೂಡಲೇ ಪೌರತ್ವ ಮಸೂದೆ ಜಾರಿಯನ್ನು ಒಪ್ಪಬೇಕಿಲ್ಲ. ಅವರು ಸಂವಿಧಾನಕ್ಕೆ ಅಗೌರವ ತೋರಿ, ಪೌರತ್ವ ಜಾರಿಗೆ ತರಲು ಹೊರಟಿದ್ದಾರೆ ಎಂದು ಸೀತಾರಾಂ ಯೆಚೂರಿ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಇಂದಿರಾಗಾಂಧಿ ಕಾಲದಲ್ಲಿ ಸಂಸತ್ ನಲ್ಲಿ ಅಂಗೀಕರಿಸಿಯೇ ಎಮರ್ಜೆಸಿ ಜಾರಿ ಮಾಡಲಾಯಿತು. ಆದ್ರೆ ಅದನ್ನು ನಾವೆಲ್ಲ ಒಪ್ಪಿದೆವೆಯೇ. ಎಮರ್ಜೆನ್ಸಿ ವಿರುದ್ಧ ದೇಶಾದ್ಯಂತ ಹೋರಾಟ ಮಾಡಲಿಲ್ಲವೆ ಎಂದು ಪ್ರಶ್ನಿಸಿದರು.
ಚುನಾವಣೆ ಪೂರ್ವದಲ್ಲಿ ರಾಮಲೀಲಾ ಮೈದಾನದಲ್ಲಿ ಪೌರತ್ವ ಮಸೂದೆ ಜಾರಿಯೇ ಇಲ್ಲ ಅಂತ ಮೋದಿ ಹೇಳ್ತಾರೆ. ಚುನಾವಣೆ ಮುಗಿದು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪೌರತ್ವ ಜಾರಿ ಅಂತಾರೆ. ತಮ್ಮ ನಿಲುವುಗಳನ್ನು ದೇಶದ ಜನತೆಯ ಮೇಲೆ ಹೇರಲು ಹೊರಟಿದ್ದಾರೆ. ಪೌರತ್ವಕ್ಕೂ ಧರ್ಮಕ್ಕೂ ಲಿಂಗ್ ಮಾಡಲು ಹೊರಟಿದ್ದಾರೆ. ಕಮ್ಯುನಲ್ ಮತಬ್ಯಾಂಕ್ ನ್ನು ಮತ್ತಷ್ಟು ಭದ್ರ ಮಾಡಿಕೊಳ್ಳಲು ಹೊರಟಿದ್ದಾರೆ. ಮೋದಿ ಮತ್ತು ಅಮಿತ್ ಶಾ ಬಾಯಲ್ಲಿ ಪಾಕಿಸ್ತಾನ, ಬಾಂಗ್ಲಾ ಮತ್ತು ಅಪಘಾನಿಸ್ತಾನಗಳೇ ಬರುತ್ತೆ. ಭಾರತದಲ್ಲಿ ಶ್ರೀಲಂಕದವರೂ ಇದ್ದಾರೆ, ಟಿಬೇಟಿಯನ್ನರೂ ಇದ್ದಾರೆ. ಯಾರೇ ಶರಣಾರ್ಥಿ ಬಂದರೂ ಕರೆದುಕೊಳ್ಳಬೇಕೆಂದಿದೆ. ಆದರೆ ಇವರು ಧರ್ಮದ ಹೆಸರಲ್ಲಿ ದೇಶ ಒಡೆಯೋ ಕೆಲಸ ಮಾಡ್ತಿದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.