ಜಿಲ್ಲಾ ಉತ್ಸವ ಹಿನ್ನೆಲೆ : ಕೆಸರುಗದ್ದೆ ಓಟ ಓಡುವಾಗ ಕೆಸರಿನಲ್ಲಿ ಬಿದ್ದ ಸಚಿವ

ಕೆಸರುಗದ್ದೆ ಓಟ ಓಡುವಾಗ ಸಚಿವ ಸಿ.ಟಿ.ರವಿ ಕೆಸರಿನಲ್ಲಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ನಡೆದಿದೆ.

ಹೌದು… ಕೆಸರುಗದ್ದೆ ಓಟಕ್ಕೆ ಚಾಲನೆ ನೀಡಿ, ಓಟದಲ್ಲಿ ಭಾಗವಹಿಸಿದ್ದ ಸಚಿವ ರವಿ, ಕೆಸರಿನಲ್ಲಿ ಬಿದ್ದರು. ಚಿಕ್ಕಮಗಳೂರಿನ ತಾಲೂಕಿನ ನಲ್ಲೂರುಗೇಟ್ ನಲ್ಲಿ ಜಿಲ್ಲಾ ಉತ್ಸವ ಹಿನ್ನೆಲೆ ಕೆಸರುಗದ್ದೆ ಓಟವನ್ನ ಆಯೋಜನೆ ಮಾಡಲಾಗಿತ್ತು.

ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.