Covid 19 : ಸರಕಾರದಲ್ಲಿ ಸಮನ್ವಯದ ಕೊರತೆ, ಸಚಿವರು ಒಂದೊಂದು ದಿಕ್ಕಿಗೆ – KDS..

ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಸರಕಾರದ ಮಟ್ಟದಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ ಆರೋಪಿಸಿದ್ದಾರೆ. ಇದಲ್ಲದೇ ಕೊರೋನಾ ಮಾರಿ ವಿರುದ್ಧದಸ ಸಮಘಟಿತ ಹೋರಾಟ ಸಂಬಮಧ ಸರಕಾರ ಕುಡಲೇ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಕೊರೋನಾ ವೈರಾಣು ಹರಡುವಿಕೆ ಸಂಬಂಧ ಲಾಕ್‌ಡೌನ್ ಹೊರತಾಗಿ ರಾಜ್ಯ ಸರ್ಕಾರ ಒಂದೇ ಒಂದು ಪ್ಲಾನ್ ಆಫ್ ಆ್ಯಕ್ಷನ್ ತೆಗೆದುಕೊಂಡಿಲ್ಲ. ನಮ್ಮನ್ನು ಕರೆದು ಸಲಹೆನೂ ಪಡೆಯುತ್ತಿಲ್ಲ ಎಂದವರು ಆರೋಪಿಸಿದರು.

ಇನ್ನು ಸರಕಾರದಲ್ಲಿ ಇಬ್ಬರು ಸಚಿವರ ನಡುವೆ ಗೊಂದಲ ಇದೆ ಅನ್ನೋದನ್ನ ನೋಡ್ತಾ ಇದ್ದೀವಿ. ಇದು ನಿಮ್ಮ ಪಾರ್ಟಿ ಪ್ರಾಬ್ಲಮ್ಮಾ, ಆಡಳಿತದ ಪ್ರಾಬ್ಲಮ್ಮಾ ಹೇಳಿ ಎಂದು ಡಿಕೆಶಿ ಪ್ರಶ್ನಿಸಿದರು.

ಸರಕಾರದಲ್ಲಿ ಅತಿ ಬುದ್ದಿವಂತ ಸಚಿವರಿದ್ದಾರೆ, ಇಬ್ಬರೂ ಸಚಿವರಿಗೆ ಕೆಲಸ ಭಾಗ ಇಟ್ಟಿದ್ದಾರೆ ಎಂದು ಶ್ರೀರಾಮುಲು ಮತ್ತು ಸುಧಾಕರ್‍ ನಡುವಿನ ಒಳಜಗಳವನ್ನು ಡಿಕೆಶಿ ವ್ಯಂಗ್ಯವಾಡಿದರು.,

ಇದೇ ವೇಳೆ ಕೊರೋನಾ ಕದನದ ಸಂದರ್ಭದಲ್ಲಿ ಕೆಲ ಆರೆಸ್ಸೆಸ್ ಕಾರ್‍ಯಕರ್ತರ ನಡೆಯ ಬಗ್ಗೆಯೂ ಶಿವಕುಮಾರ್‍ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೆಸ್ಎಸ್ ಸಿದ್ದಾಂತ, ಕೆಲಸದ ಬಗ್ಗೆ ಚರ್ಚೆ ಮಾಡಲ್ಲ. ಅನುಮತಿ ತೆಗೆದುಕೊಂಡಿದ್ದೇವೆ ಅಂತ ಕಲೆಕ್ಷನ್ ಮಾಡಲು ಕೆಲವರು ಹೊರಟಿದ್ದಾರೆ. ಐದು ಕೆ.ಜಿ ಅಕ್ಕಿ, ಸಾಲ್ಟ್, ಅಡುಗೆ ಅಣ್ಣೆ ಕೊಡ್ತೀವಿ ಅಂತ ಗಾಡಿಗಳಲ್ಲಿ ಓಡಾಡ್ತಿದ್ದಾರೆ . ಇದಕ್ಕೆ ಸಿಎಂ ಅವ್ರು ಅನುಮತಿ ಕೊಟ್ಟಿದ್ದಾರಾ ಎಂದು ಡಿಕೆಶೀ ಪ್ರಶ್ನೆ ಮಾಡಿದ್ದಾರೆ.

ಎಲ್ರೂ ಕೂಡ ಸೇವೆ ಮಾಡಲು ರೆಡಿಯಾಗಿದ್ದಾರೆ. ಆದ್ರೆ ಇವ್ರು ಬೇಕಾಬಿಟ್ಟಿ ಓಡಾಡ್ಕೊಂಡು ಇದ್ದಾರೆ. ನಾವು ಎಲ್ಲ ರೀತಿಯ ಸಹಕಾರ ಕೊಡ್ತೀವಿ ಅಂತ ಹೇಳಿದ್ದೀವಿ. ಆದ್ರೆ ನಿಮ್ಮ ಕಾರ್ಯಕರ್ತರು ರಾಜಕೀಯ ಲಾಭ ಪಡೆದುಕೊಳ್ತಿದ್ದಾರೆ. ಇದು ಸರೀನಾ ಎಂದು ಶಿವಕುಮಾರ್‍ ಕೇಳಿದರು.

ಇದೇ ವೇಳೆ ಕಾರ್‍ಯ ನಿಮಿತ್ತ ಮನೆಯಿಂದ ಹೊರಬರುವ ಜನರ ಮೇಲೆ ಪೊಲೀಸರ ಕ್ರಮದ ಬಗ್ಗೆಯೂ ಅವರು ಆಲೋಚನೆ ಮಾಡಿದರು. ಪೊಲೀಸ್ ಮಾಡ್ತಿರೋ ಕಾರ್ಯ ಶೈಲಿ ತೋರಿಸ್ತಿದ್ದೀರಿ. ಹೊಡೆಯೋದು, ತುಳಿಯೋ ಕೆಲಸ ಮಾಡ್ತಿದ್ದಾರೆ. ಅತಹ ಅಪರಾಧ ಏನ್ ಮಾಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.