ಉಪವಾಸ ಮುಗಿಸಲು ಇಲ್ಲಿನ ಜನ ಏನು ಮಾಡ್ತಾರೆ ಗೊತ್ತಾ?

ಮಹಾ ಶಿವರಾತ್ರಿಯ ಉಪವಾಸದ ಜೊತೆ ಆಯಾ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಅತಿ ವಿಜೃಂಭಣೆಯಿಂದ ನಡಿದಿದೆ, ಹಾಗೇಯೆ ಅಮವಾಸ್ಯೆಯಂದು ಕಾರವಾರ ಮಾಜಾಳಿಯಲ್ಲಿ ಉಪವಾಸ ಬಿಡುವ ಧಾರ್ಮಿಕ ಕಾರ್ಯ ವಿಭಿನ್ನವಾಗಿ ಆಚರಿಸಲಾಯಿತು…

ಪ್ರತಿ ವರ್ಷದ ಶಿವರಾತ್ರಿ ಅಮವಾಸ್ಯೆಯಂದು ನಡೆಯುವ ಈ ಉಪವಾಸ ಮುರಿಯುವ ಧಾರ್ಮಿಕ ಕಾರ್ಯಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ಇಲ್ಲಿನ ಸಮುದ್ರದಲ್ಲಿ ಸಾವಿರಾರು ಜನ ಸ್ನಾನ‌ಮಾಡಿ ಸುತ್ತಮುತ್ತಲಿನ ಏಳು ದೇವರ ಪಲ್ಲಕ್ಕಿಗೆ ಪೂಜೆ ಪುನಸ್ಕಾರ ನೆರವೇರಿಸ್ತಾರೆ..

ಗ್ರಾಮದ ಸುತ್ತಮುತ್ತಲಿರುವ ಶಿವ ದೇವರನ್ನು ನೆನೆದು ಮನೆಯಲ್ಲಿ ಸಿಹಿ ಊಟ ಮಾಡಿ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋದು ನೂರಾರು ವರ್ಷದಿಂದ ಬಂದ ಪದ್ದತಿ.. ಇದರ ಜೊತೆಯಲ್ಲೆ ತಮ್ಮ ಪೂರ್ವಜರ ಕ್ರೀಯಾಕರ್ಮದ ವಿಧಿವಿಧಾನವನ್ನು ಸಹ ಇದೆ ಜಾಗದಲ್ಲಿ ಮಾಡ್ತಾರೆ.

ಒಟ್ಟಾರೆ ಆಯಾ ಜಿಲ್ಲೆ ಹಾಗು ಆಯಾ ಗ್ರಾಮಕ್ಕೆ ತಕ್ಕಂತೆ ವಿಶಿಷ್ಠ ಸಾಂಪ್ರದಾಯಗಳು ನಡೆದುಕೊಂಡುಬಂದಿವೆ, ಹಾಗೇಯೆ ಇಂದಿಗೂ ಇಂತ ಸಾಂಪ್ರದಾಯಗಳು ಮರೆಯಾಗದೆ ಆಚರಣೆಯಲ್ಲಿರೋದು ಇಲ್ಲಿನ ಜನರ ಧಾರ್ಮೀಕ ಭಾವನೆ ಎತ್ತಿ ತೋರಿಸುತ್ತದೆ.