ಆಡಿಯೋ ಮಾರ್ಕೆಟ್ ನಲ್ಲಿ ಹೊಸ ದಾಖಲೆ ಬರೆದ ಪ್ರೇಮ್ಸ್ ಏಕ್ ಲವ್ ಯಾ..!!!

ಸ್ಯಾಂಡಲ್ ವುಡ್ ನ ದಾಖಲೆಗಳ ಸರ್ಧಾರ ಡೈರೆಕ್ಟರ್ ಪ್ರೇಮ್ಸ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪ್ರೇಮ್ಸ್ ರ ವಿಭಿನ್ನ ಶೈಲಿಯ ಲವ್ ಕಹಾನಿಯ “ಏಕ್ ಲವ್ ಯಾ” ಸಿನೆಮಾದ ಆಡಿಯೋ ರೈಟ್ಸ್ ಗಾಗಿ ಕನ್ನಡ ಆಡಿಯೋ ಕಂಪನಿಗಳು ಮುಗಿಬಿದ್ದಿವೆ. ಲವ್ ಏಕ್ ಯಾ ಆಡಿಯೋ ಧಾಖಲೆ ಮೊತ್ತದ ವ್ಯವಹಾರ ನಡೆಸಿದ್ದು, ಬರೊಬ್ಬರಿ 81 ಲಕ್ಷಕ್ಕೆ A2 ಮ್ಯೂಸಿಕ್ ಪಾಲಾಗಿದೆ. ಇದಕ್ಕೂ ಮುನ್ನ ಆಡಿಯೋ ರೈಟ್ಸ್ ಗಾಗಿ ಭಾರೀ ವ್ಯವಹಾರಿಕ ಫೈಟ್ ನಡೆದಿದ್ದು, ಹಲವಾರು ಆಡಿಯೋ ಕಂಪನಿಗಳು ಭಾಗವಹಿಸಿದ್ದವು,

ಇದುವರೆಗೂ ಅಶ್ವಿನಿ ಆಡಿಯೋ ಪಾಲಿಗೆ ಲಕ್ಕಿಯಾಗಿದ್ದ ಪ್ರೇಮ್ಸ್ ಈಗ A2 ಮ್ಯೂಸಿಕ್ ಮೂಲಕ ಪಯಣ ಆರಂಬಿಸಿದ್ದಾರೆ. ಇನ್ನೂ ಜೋಗಿ ಪ್ರೇಮ್ ನಿರ್ದೇಶನದ ಟ್ರೆಂಡಿ ಮ್ಯೂಸಿಕಲ್ ಲವ್ ಸಿನಿಮಾ ಏಕ್ ಲವ್ ಯಾ, ರಕ್ಷಿತಾ ಪ್ರೇಮ್ ನಿರ್ಮಾಣದ ರಕ್ಷಿತಾ ಫಿಲಂ ಫ್ಯಾಕ್ಟರಿ ಬ್ಯಾನರ್ ನಡಿಯಲ್ಲಿ ತಯಾರಾಗ್ತಿದೆ. ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅಭಿನಯದ ಚೊಚ್ಚಲ ಚಲನ ಚಿತ್ರ ಇದಾಗಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಕುವರಿ ನವನಾಯಕಿ ರೀಷ್ಮಾ ರಾಣಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ದಾಖಲೆ ಮೊತ್ತಕ್ಕೆ ಸೇಲ್ ಆಗಿರೊ ಈ ಸಿನೆಮಾ ಹಾಡುಗಳಿಗೆ ಸ್ಯಾಂಡಲ್ ವುಡ್ ಖ್ಯಾತ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಸಂಗೀತದ ಸಾರಥ್ಯ ವಹಿಸಿದ್ದಾರೆ.

ಒಟ್ಟಿನಲ್ಲಿ ಕರಿಯ, ಎಕ್ಸ್ ಕ್ಯೂಸ್ ಮೀ, ಜೋಗಿ, ಜೋಗಯ್ಯ. ಪ್ರೀತಿ ಏಕೆ ಭೂಮಿ ಮೇಲಿದೆ, ಈ ಎಲ್ಲಾ ಸಿನಿಮಾಗಳ ನಂತರ ಸದ್ಯ ಏಕ್ ಲವ್ ಯಾ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡ್ತಿರೋದಂತೂ ಸುಳ್ಳಲ್ಲ.