ಹಜ್ ಯಾತ್ರೆ ಹೆಸರಿನಲ್ಲಿ ದೋಖಾ : 100 ಕ್ಕೂ ಹೆಚ್ಚು ಜನರಿಗೆ ಪಂಗನಾಮ!

ಹಜ್ ಯಾತ್ರೆ ಹೆಸರಿನಲ್ಲಿ ದೋಖಾ ಮಾಡಿ ಹಜ್-ಉಮ್ರಾ ಯಾತ್ರೆ ಹೆಸರಿನಲ್ಲಿ 100 ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ ಘಟನೆ ನಡೆದಿದೆ.

ಹೌದು… ಹಗಲು ರಾತ್ರಿ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣ, ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಲೂಟಿ ಮಾಡಿದ ಘಟನೆ ಶಿವಮೊಗ್ಗದ ಮುಜಾಕೀರ ಮತ್ತು ತಂಡದಿಂದ ನಡೆದಿದೆ.

ಜನರು ಲಕ್ಷಾಂತರ ರೂ. ಕಳೆದುಕೊಂಡು ಪವಿತ್ರ ಹಜ್ ಯಾತ್ರೆನೂ ಇಲ್ಲದೇ ಕೊರಗುತ್ತಿದ್ದಾರೆ. ಶಿವಮೊಗ್ಗದ ಬಸ್ ನಿಲ್ದಾಣ ಬಳಿ ತೂಬ ಇಂಟರ್ ನ್ಯಾಶನಲ್ ಟ್ರಾವಲ್ಸ್ ನ ಸೈಯದ್ ಮುಜಾಕೀರ್, ಎಂಬಾತನೇ ನಂಬಿದವರಿಗೆ ಲಕ್ಷಾಂತರ ರೂ. ದೋಖಾ ಮಾಡಿರುವ ಆರೋಪಿ.

ವಯಸ್ಸಾದ ಅಮಾಯಕರನ್ನು ಹಜ್ ಯಾತ್ರೆಗೆ ಕಳುಹಿಸುವುದಾಗಿ ನಂಬಿಸಿ ಅವರಿಂದ ಲಕ್ಷ ಲಕ್ಷ ರೂ. ಪೀಕಿರುವ ಖದೀಮ, ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಿ ವಯಸ್ಸಾದ ಹಜ್ ಯಾತ್ರಿಕರಿಗೆ ಮೋಸ ಮಾಡಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದು, ದೂರು ಆಧಾರದ ಮೇಲೆ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.

Leave a Reply