ಅಬ್ಬರಿಸಿ ಬೊಬ್ಬಿರಿದ ಸೂರಿ- ಡಾಲಿ ಧನಂಜಯ ಪಾಪ್ ಕಾರ್ನ್ ಮಂಕಿ ಟೈಗರ್

ಸೂರಿ ಸಿನಿಮಾ ಅಂದರೆ ಅಲ್ಲೊಂದು ಆಲೋಚನೆ ಇರುತ್ತೆ. ಅಲ್ಲೊಂದು ಕುತೂಹಲ ಇರುತ್ತೆ. ಫಿಲೋಸೊಫಿ ಇರುತ್ತದೆ.

ಪಾಪ್ ಕಾರ್ನ್ ಮಂಕಿ ಟೈಗರ್ ಪಕ್ಕಾ ಮಾಸ್ ಸಿನಿಮಾ. ಸಿನಿಮಾ ನೋಡಿದ ಪ್ರೇಕ್ಷಕರು ಒಂದು ಬಾರಿ ಸಿನಿಮಾ ನೋಡಿದ್ರೆ ಅರ್ಥ ಆಗೋದಿಲ್ಲ ಮತ್ತೊಂದು ಬಾರಿ ನೋಡ್ಬೇಕು ಅಂತಿದ್ದಾರೆ.

ಸಿನಿಮಾದ ಮುಖ್ಯ ಪಾತ್ರದಾರಿ ಸೀನಾ ಮೂರು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಹೊಸ ಕಲಾವಿದರ ಪರಿಚಯವಾಗಿದೆ. ತುಂಬಾ ಪಾತ್ರಗಳು, ಕಲಾವಿದರ ಮೂಲಕ ಹುಟ್ಟಿದ ಸಿನಿಮಾ ಇದು. ಕೊನೆವರೆಗೂ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಒಂದು ರೀತಿ ಕಾಡುವ ಸಿನಿಮಾ ಇದಾಗಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

ಕ್ಲೈಮ್ಯಾಕ್ಸ್ ನಲ್ಲಿ ಕುತೂಹಲಕಾರಿ ಎಂಡಿಂಗ್ ಕೂಡ ಸಿನಿಮಾದಲ್ಲಿ ಇದೆ. ನಿರ್ದೇಶಕ ಸೂರಿಯ ಈ ಸಿನಿಮಾದಲ್ಲಿ ಧನಂಜಯ್ ಮಾತ್ರ ಸೂಕ್ತ ಎಂದು ಹೇಳಲಾಗುತ್ತಿದೆ. ಸದ್ಯ ಪಾಪ್ ಕಾರ್ನ್  ಮಂಕಿ ಟೈಗರ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳು ಇದನ್ನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದ ನೋಡಬೇಕಿದೆ.

ರಾಜ್ಯದಾದ್ಯಂತ ಫಸ್ಟ್ ಡೇ 80 ಪರ್ಸೆಂಟ್ ಹೌಸ್ ಫುಲ್ ಶೋ ಇದಾಗಿದ್ದು, ರಾಜ್ಯದಾದ್ಯಂತ ಸಿನಿಪ್ರಿಯರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ವರ್ಗದವರನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಸೆಳೆಯುತ್ತಿದೆ. ಸೂರಿ ಡಿಫರೆಂಟ್ ಸ್ಕ್ರೀನ್ ಪ್ಲೇಗೆ ಬೋಲ್ಡ್ ಆದ ಸಿನಿಪ್ರಿಯರು, ಮಂಕಿಸೀಸನಾಗಿ ನಟರಾಕ್ಷಸ ಡಾಲಿ ಧನಂಜಯ ಶ್ರೇಷ್ಠ ಅಭಿನಯ ಎನ್ನುತ್ತಿದ್ದಾರೆ.

PMT ವರ್ಲ್ಡ್ ಲೆವೆಲ್ ಸಿನಿಮಾ ನಿರ್ದೇಶನ ನಿರೂಪಣೆ ಮಾಡಿದ ಸೂರಿಗೆ ಜನ ಜೈ ಎಂದಿದ್ದಾರೆ.  ಚರಣ್ ರಾಜ್ ಹಿನ್ನೆಲೆ ಸಂಗೀತಕ್ಕೆ ಶಹಬ್ಬಾಸ್ ಎಂದ ಪ್ರೇಕ್ಷಕರು, ಶೇಖರ್ ಛಾಯಾಗ್ರಹಣಕ್ಕೆ ಬೆರಗಾಗಿದ್ದಾರೆ. ಪಾಪ್ ಕಾರ್ನ್ ದೇವಿಯಾಗಿ ನಿವೇದಿತಾ ಸ್ಮಿತಾ ಮಿಂಚುಹರಿಸಿದ್ದಾರೆ.  ಗಿರಿಜಾ ಪಾತ್ರದಲ್ಲಿ ಸಪ್ತಮಿಗೌಡ ಮತ್ತು ಸುಮಿತ್ರ ಪಾತ್ರದಲ್ಲಿ ಅಮೃತ ಮನೋಘ್ನ ಅಭಿನಯ ಮಾಡಿದ್ದಾರೆ. ಇನ್ನೂ ಕಾಗೇ ಬಂಗಾರ ಲಿಂಕ್ ನಲ್ಲಿ ಸಿದ್ದಿ ಮತ್ತು ತೇಜಸ್ವಿ ಕಾಂಬಿನೇಷನ್ ಕಮಾಲ್ ಮಾಡಿದ್ದಾರೆ. ಮೂಗನಾಗಿ ಹೈಲೈಟ್ ಆದ ನಿವೇದಿತಾ ಸಹೋದರ ಗೌತಮ್ ಹೀಗೆ  ಎಲ್ಲಾ ಆಂಗಲ್ ನಿಂದ್ಲೂ ಪಾಪ್ ಕಾರ್ನ್ ಮಂಕಿ ಟೈಗರ್ ಎಕ್ಸೆಲೆಂಟ್ ಎನ್ನುತ್ತಿದ್ದಾರೆ ಫ್ಯಾನ್ಸ್.