“ದೇಶದ್ರೋಹ ಕೆಲಸ ಮಾಡುವವರನ್ನು ಮಟ್ಟಹಾಕುತ್ತೇವೆ” ಡಿವಿ ಸದಾನಂದಗೌಡ ಎಚ್ಚರಿಕೆ

ಸಿಎಎ ವಿರೋಧಿಸುವ ನೆಪದಲ್ಲಿ ದೇಶದ್ರೋಹ ಕೆಲಸ ಮಾಡುವವರನ್ನು ಕೇಂದ್ರ ರಾಜ್ಯಗಳು ಸೇರಿ ಮಟ್ಟಹಾಕುತ್ತೇವೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಎಚ್ಚರಿಕೆ ನೀಡಿದ್ರು.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದಲ್ಲಿ ನಡೆಯುತ್ತಿರುವ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಧರ್ಭ ಅವರು ಮಾತನಾಡಿದ್ರು. ಸಿಎಎ ವಿರುದ್ದದ ಸಮಾವೇಶವನ್ನು ದೇಶ ವಿರೋಧಿ ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಇವುಗಳನ್ನು ಬೆಳೆಯಲು ಬಿಡುವುದಿಲ್ಲ, ಜೊತೆಗೆ ಅವುಗಳನ್ನು ಮಟ್ಟಹಾಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದ್ರು.

ಇನ್ನು ಗುಜರಾತ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವ ಸದಾನಂದಗೌಡ ಭಾರತ ಈಗ ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಹೀಗಾಗಿ ಅಮೆರಿಕಕ್ಕೂ ಭಾರತ ಸ್ನೇಹ ಬೇಕೆನಿಸಿದೆ. ಆದ್ದರಿಂದ ಟ್ರಂಪ್ ಅವರು ಭಾರತಕ್ಕೆ ಬರುತ್ತಿದ್ದಾರೆ. ಈ ಸಂದರ್ಭ ದೇಶದ ಅಭಿವೃದ್ಧಿ ದೃಷ್ಟಿಯಿಂದ ಹಲವು ಮಹತ್ವದ ಒಪ್ಪಂದಗಳಾಗಲಿವೆ ಎಂದ್ರು.