ದಕ್ಷಿಣ ಮಿಂಡಾನಾವೊ ದ್ವೀಪದಲ್ಲಿ ಭೂಕಂಪನ : 7 ಮಂದಿ ಸಾವು

ದಕ್ಷಿಣ ಮಿಂಡಾನಾವೊ ದ್ವೀಪದಲ್ಲಿ ನಿನ್ನೆ ಸಂಭವಿಸಿರುವ ಭೂಕಂಪನದ ಪರಿಣಾಮವಾಗಿ ಸುಮಾರು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ . ಮ್ಯಾಗ್ಸೆಸೆ ಪಟ್ಟಣದ ಆಗ್ನೇಯಕ್ಕೆ 3 ಕಿ.ಮೀ.ದೂರದಲ್ಲಿ ಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ 6 ವರ್ಷದ ಬಾಲಕಿ ಮೃತಪಟ್ಟಿದ್ದು , ಇನ್ನೂ 37 ಜನರು ಗಾಯಗೊಂಡಿದ್ದಾರೆ ಎಂದು ಹಿಂದಿನ ವರದಿಗಳು ಸೂಚಿಸಿವೆ.

ಭೂಕಂಪನದ ತೀವ್ರತೆಗೆ ಐದು ಕಿ.ಮೀ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಗಂಭೀರ ಹಾನಿಯಾಗಿದೆ. ಪಾಡಾಡ ಪಟ್ಟಣದಲ್ಲಿ ಸೂಪರ್‌ ಮಾರ್ಕೆಟ್‌ ಕಟ್ಟಡವೊಂದು ಕುಸಿದಿದ್ದು ಆರು ಮೃತ ದೇಹಗಳನ್ನು ಹೊರತೆಗೆದಿದ್ದಾರೆ ಎಂದು ಫಿಲ್ಸ್ಟಾರ್ ಗ್ಲೋಬಲ್ ಪತ್ರಿಕೆ ವರದಿ ಮಾಡಿದ್ದು , ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಮಟನಾವೋ ಪಟ್ಟಣದ ಮೇಯರ್, ಭೂಕಂಪನದಿಂದಾಗಿ 2 ಬಹು ಮಹಡಿ ಕಟ್ಟಡಗಳು ಜಖಂ ಆಗಿವೆ. ಅಲ್ಲದೆ ಎರಡು ಮೇಲ್ಸೇತುವೆಗಳು ಮತ್ತು ಸಣ್ಣಪುಟ್ಟ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply