Election 2019 : ಹಳೆಯದ್ದನ್ನೆಲ್ಲ ಮರೆತು ಒಂದಾದ ಉದ್ಧವ್ ಗೆ ಮೋದಿನೆ ನಾಯಕ…

ದೇಶವನ್ನು ಮುನ್ನಡೆಸಲು ಸಮರ್ಥರಾದ ನಾಐಕ ನಮ್ಮ ಬಳಿ ಇದ್ದಾರೆ, ಅವರೇ ಮೋದಿ. ಆದರೆ, ನಿಮ್ಮ ಬಳೀ ಅಂತಹ ನಾಯಕ ಯಾರಿದ್ದಾರೆ ಹೇಳಿ ನೋಡೋಣ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.

ಇದೇ ಮದೊಲ ಬಾರಿಗೆ ಗಾಂಧಿನಗರದಿಂದ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಯುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಾಮಪತ್ರ ಸಲ್ಲಿಕೆ ಸಂದರ್ಭ ಹಾಜರಿದ್ದು ನಂತರ ಉದ್ಧವ್ ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಕೆಲವಾರು ವಿಷಯಗಳ ಕಾರಣ ಬಿಜೆಪಿ ಮತ್ತು ಶಿವಸೇನೆ ನಡುವೆ ಅಭಿಪ್ರಾಯ ಭೇದ ುಂಟಾಗಿತ್ತು. ಆದರೆ ಅಮಿತ್ ಶಾ ಎಲ್ಲ ತಪ್ಪು ಅಭಿಪ್ರಾಯಗಳನ್ನೂ ನಿವಾರಿಸಿದ್ದಾರೆ. ದೇಶದ ಸಲುವಾಗಿ ಬಿಜೆಪಿ-ಸೇನಾ ಮೈತ್ರಿ ಅಬಾಧಿತವಾಗಿರುತ್ತದೆ ಎಂದು ಅವರು ಹೇಳಿದರು.

ನಮ್ಮ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ವಿರೋಧಿ ಪಾಳೆಯದ ಅನೇಕರು ಹಿರಿಹಿರಿ ಹಿಗ್ಗಿದ್ದರು. ಆದರೆ ಅವರ ಹಿಗ್ಗು ಈಗ ಭ್ರಮನಿರಸನವಾಗಿರಲಿಕ್ಕೆ ಸಾಕು ಎಂದು ಉದ್ಧವ್ ಠಾಕ್ರೆ ಕುಟುಕಿದರು.

ಹಿಂದುತ್ವ ಮತ್ತು ರಾಷ್ಟ್ರೀಯತೆ ಈ ಎರಡೂ ಪಕ್ಷಗಳನ್ನು ಒಂದುಗೂಡಿಸುವ ಗೋಮದಾಗಿ ಕೆಲಸ ಮಾಡಲಿದೆ.

ಈ ವಿಚಾರವಾಗಿ ಬಿಜೆಪಿ ಮತ್ತು ಶೀವಸೇನೆ ನಿಲುವು ಎಂದೂ ಬದಲಾಗದು ಎಂದು ಉದ್ಧವ್ ಠಾಕ್ರೆ ಹೇಳಿದರು. ಆಡಳಿತ ಎನ್ಡಿಎ ವಿರುದ್ಧ 58 ಪಕ್ಷಗಳ ನಾಯಕರು ಒಂದಾಗಿದ್ದಾರೆ. ಆದರೆ ಅವರ ಬಳಿ ಓರ್ವ ಸಮರ್ಥ ನಾಐಕನೇ ಇಲ್ಲ. ಅದೇ ನಮಗೆ ಮೋದಿ ಅವರ ಸಮರ್ಥ ನಾಯಕತ್ವ ಇದೆ ಎಂದು ಅವರು ಚುಚ್ಚಿದರು.

Leave a Reply