ಯುವತಿಯ ಫೋಟೋ ತೆಗೆದು ಕಿರಿಕಿರಿ : ಕಾಂಟ್ರ್ಯಾಕ್ಟರ್‌ಗೆ ಬಿತ್ತು ಸಖತ್ ಗೂಸಾ

ರೋಡ್ ರೋಮಿಯೊ ಥರ ಯುವತಿಯ ಬೆನ್ನು ಹತ್ತಿದ್ ಗುತ್ತಿಗೆದಾರನಿಗೆ ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಉರುಳಾಡಿಸಿ ಗೂಸಾ ನೀಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿ ನಡೆದಿದೆ.

ಮೋತಿಸಾಬ್ ತಳೇವಾಡ ಎಂಬ ಕಟ್ಟಡ ನಿರ್ಮಿಸುವ ಗುತ್ತಿಗೆದಾರ ಮದುವೆಯಾಗಿದ್ದ. ಆದರೆ, ಮತ್ತೊಂದು ಯುವತಿಯ ಹಿಂದೆ ಬಿದ್ದಿದ್ದ. ಹಣ ಕೊಡ್ತಿನಿ, ಬರ್ತಿಯಾ ಎಂದು ಕಾಲೇಜು ಯುವತಿಗೆ ಕೇಳಿದ್ದ. ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ನಿಡಗುಂದಿ ಪಟ್ಟಣದ ಹೊರ ವಲಯಕ್ಕೆ ಕರೆದೊಯ್ದು ಚಪ್ಪಲಿಯಿಂದ ಬಾರಿಸಿದ್ದಾರೆ.

ಈ ಯುವತಿ ಗುತ್ತಿಗೆದಾರ ಮೋತಿಸಾಬ್ ತಳೇವಾಡ್ ಗೆ ಪರಿಚಯವಿದ್ದರೂ ಆಕೆಯ ಹಿಂದೆ ಬಿದ್ದು ಚುಡಾಯಿಸುವುದನ್ನು ಮುಂದುವರೆಸಿದ್ದ. ಅಷ್ಟೇ ಅಲ್ಲ, ಯುವತಿಯಫೋಟೋ ತೆಗೆದು ಕಿರಿಕಿರಿ ಮಾಡುತ್ತಿದ್ದ. ಕೇಳಿದಷ್ಟು ಹಣ ಕೊಡುತ್ತೇನೆ. ಹಾಸಿಗೆಗೆ ಬಾ ಎಂದು ಕರೆಯುತ್ತಿದ್ದ. ಇದರಿಂದ ರೋಸಿ ಹೋದ ಯುವತಿ, ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ.

ಈಗ ಸಿಟ್ಟಾದ ಯುವತಿಯ ಸಂಬಂಧಿಕರು ಕಟ್ಟಡ ಗುತ್ತಿಗೆದಾರ ಮೋತಿಸಾಬ್ ತಳೇವಾಡನನ್ನು ನಿಡಗುಂದಿ ಪಟ್ಟಣದ ಹೊರವಲಯಕ್ಕೆಕರೆದೊಯ್ದು ನೆಲದ ಮೇಲೆ ಉರುಳಾಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಝಾಡಿಸಿ ಒದ್ದಿದ್ದಾರೆ. ಅಷ್ಟೇ ಅಲ್ಲ, ಚಪ್ಪಲಿಯಿಂದ ಹೊಡೆಯುವ ಮೂಲಕ ಛಳಿ ಬಿಡಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.