ಕಣ್ಣೀರಿಟ್ಟು ಪ್ಲೀಸ್‌ ಎಂದು ಬೇಡಿಕೊಂಡ ಐಶ್‌…….ಅಳುವಂತಹ ಘಟನೆ ನಡೆದದ್ದಾದರೂ ಏನು..?

ಇತ್ತೀಚೆಗಷ್ಟೇ ನೀಲಿ ಕಂಗಳ ಚೆಲುವೆ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ತಮ್ಮ ದಿವಂಗತ ತಂದೆಯ ಹುಟ್ಟುಹಬ್ಬ ಆಚರಿಸಿ ಸೀಳು ತುಟಿಯ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ.

ಐಶ್ವರ್ಯಾ ರೈ ಅವರ ತಂದೆ ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಐಶ್ವರ್ಯಾ 100 ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಅಲ್ಲದೆ ತಂದೆಯವರ ಜನ್ಮದಿನ ಸೆಲೆಬ್ರೇಟ್ ಮಾಡಲು ಮಗಳು ಆರಾಧ್ಯಾ ಜೊತೆ ಐಶ್ವರ್ಯ ಸ್ಮೈಲ್‌ ಫೌಂಡೇಶನ್‌ ಎಂಬ ಸಂಸ್ಥೆಗೆ ಭೇಟಿ ನೀಡಿದ್ದು, ಮಗಳೊಂದಿಗೆ ಕೇಕ್‌ ಕತ್ತರಿಸಿ ಮಕ್ಕಳಿಗೆ ನೀಡಿದ್ದರು.

ಆದರೆ ಈ ವೇಳೆ ಮಾಧ್ಯಮಗಳು ಐಶ್ವರ್ಯಾ ರೈ ಬರುತ್ತಾರೆ ಎಂಬ ಕಾರಣಕ್ಕೆ ಮುಗಿಬಿದ್ದು ಫೋಟೊ ತೆಗೆಯಲು ಪ್ರಾರಂಭಿಸಿದ್ದಾರೆ. ಈ ವೇಳೆ ಐಶ್ವರ್ಯ ಆವರಿಗೆ ಕಸಿವಿಸಿಯಾಗಿದ್ದು, ಫೋಟೊ ಗ್ರಾಫರ್‌ಗಳಿಗೆ ಬೈದಿದ್ದಾರೆ.

ಈ ವೇಳೆ ಐಶ್ವರ್ಯಾ ಭಾವುಕರಾಗಿದ್ದು, ದಯವಿಟ್ಟು ಫೋಟೋ ತೆಗೆಯಬೇಡಿ. ಇಲ್ಲಿ ಯಾವುದ ಪ್ರೀಮಿಯರ್‌ ಶೋ ನಡೆಯುತ್ತಿಲ್ಲ. ನನ್ನ ವೈಯಕ್ತಿಕ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಅರ್ಥ ಮಾಡಿಕೊಳ್ಳಿ ಎಂದು ಬೇಡಿಕೊಂಡ ಪ್ರಸಂಗ ನಡೆದಿದೆ.

 

Leave a Reply