Flood in Karnataka : ಸಂಪುಟ ಇಲ್ಲ, ಪರಿಹಾರ ವಲ್ಲ ಪ್ರತಿಪಕ್ಷ ಸಭೆ ಕರೆಯಿರಿ: HDK ಆಗ್ರಹ

ರಾಜ್ಯದಲ್ಲಿ ತಲೆದೋರಿರಿವ ಅಭೂತಪೂರ್ವ ನೆರೆ ಪರಿಸ್ಥಿತಿ ಮತ್ತು ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳ ಸಭೆ ಕರೆಯುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.


ಸಚಿವ ಸಂಪುಟ ರಚನೆಯಾಗದೇ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗ ಆಗಿರುವ ನಷ್ಟವನ್ನ ಅಂದಾಜು ಮಾಡಲು ಒಂದು ತಿಂಗಳಿಗೂ ಹೆಚ್ಚು ಕಾಲವಾಗಬಹುದು.

ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದಿರುವುದರಿಂದ ಪರಿಹಾರ ಕಾರ್‍ಯಗಳಿಗೆ ತೊಡಕುಂಟಾಗಿದೆ. ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. 16 ರಂದು ಸಂಪುಟ ವಿಸ್ತರಣೆ ಅಂತಾರೆ, ಆದರೆ ಯಾವಾಗ ಮಾಡ್ತಾರೋ ಗೊತ್ತಿಲ್ಲ. ಈ ಕಾರಣ ಕೂಡಲೇ ಪ್ರತಿಪಕ್ಷಗಳ ಮುಖಂಡರ ಸಭೆ ಕರೆಯಿರಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಇನ್ನೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಎನ್ ಡಿಆರ್ ಎಫ್ ಗೈಡ್ ಲೈನಗ ಪ್ರಕಾರವಾದ್ರೂ ಪರಿಹಾರ ನೀಡಬೇಕಿತ್ತು. ಸಿಎಂ ಯಡಿಯೂರಪ್ಪಗೆ ದೆಹಲಿಯಲ್ಲಿ ಎಷ್ಟರಮಟ್ಟಿಗೆ ಮರ್ಯಾದೆ ಕೊಡ್ತಾರೋ ಗೊತ್ತಿಲ್ಲ ಎಂದು ಎಚ್ಡಿಕೆ ಹೇಳಿದರು.

ರಾಜ್ಯದಲ್ಲಿ 4 ರಿಂದ 5 ಲಕ್ಷ ಕುಟುಂಬಗಳು ಬೀದಿಗೆ ಬಂದಿವೆ. ಸಮೀಕ್ಷೆಗೆಂದು ಬಂದ ಗೃಹಸಚಿವರು ಕೇಂದ್ರದ ನಿಲುವು ಪ್ರಕಟ ಮಾಡಬೇಕಿತ್ತು. ಸಿಎಂ ಮವನಿಗೆ ಯಾವುದೇ ಪ್ರತಿಕ್ರಿಯೆ ಅಥವಾ ಭರವಸೆ ನೀಡದೇ ವಾಪಸ್ ಹೋಗಿದ್ದಾರೆ. ಕೇಂದ್ರ ಸರ್ಕಾರ ಭರವಸೆ ನೀಡಿದ್ರೆ ಜನ್ರಿಗೆ ಒಂದು ಸಾಂತ್ವನ ಸಿಗುತ್ತಿತ್ತು.

ಕೇಂದ್ರದಿಂದ ತಕ್ಷಣಕ್ಕೆ 4 ರಿಂದ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು ಎಂದ ಎಚ್ಡಿಕೆ ರೈತರ ಸಾಲಮನ್ನಾ ಅಡಿಯಲ್ಲಿನ ಹಣವನ್ನ ಪ್ರಕೃತಿ ವಿಕೋಪಕ್ಕೆ ವರ್ಗಾವಣೆ ಮಾಡುವಂತೆ ಸಲಹೆ ನೀಡಿದರು.

Leave a Reply