ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಲೂಕಾಸ್ ವಿದಾಯ..

ಲಂಡನ್: ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಜರ್ಮನಿಯ ಲೂಕಾಸ್ ಪೊದೋಲ್‌ಸ್ಕಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಅವರ ೧೨ ವರ್ಷಗಳ ಅಂತಾರಾಷ್ಟ್ರೀಯ ಫುಟ್ಬಾಲ್ ಜೀವನ ಅಂತ್ಯಗೊಂಡಿತು.

ಜರ್ಮನಿ ತಂಡದ ಪ್ರಮುಖ ಆಟಗಾರರಾಗಿದ್ದ ಅವರು, ತಂಡಕ್ಕೆ  ವಿಶ್ವಕಪ್ ಸೇರಿದಂತೆ ಹಲವು ಪ್ರಶಸ್ತಿ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೂಕಾಸ್ ಸುಮಾರು ೫೦ ಗೋಲು ಗಳಿಸಿದ್ದಾರೆ.

lukas podul 5

 

ನಿವೃತ್ತಿ ಕುರಿತು ಲೂಕಾಸ್ ಪೊದೋಲ್‌ಸ್ಕಿ ಸೋಮವಾರ ಅಧಿಕೃತವಾಗಿ ಪ್ರಕಟಿಸಿದ್ದು, ಇದನ್ನು ಜರ್ಮನಿ ಫುಟ್ಬಾಲ್ ತಂಡದ ಕೋಚ್ ಜೋಚಿಮ್ ಖಚಿತಪಡಿಸಿದ್ದಾರೆ. ಇದರೊಂದಿಗೆ ಜರ್ಮನಿ ತಂಡ ಓರ್ವ ಶ್ರೇಷ್ಠ ಆಟಗಾರನ ಸೇವೆಯನ್ನು ಕಳೆದುಕೊಂಡಂತಾಗಿದೆ.

ಪೋಲ್ಯಾಂಡ್‌ನಲ್ಲಿ ಜನಿಸಿದ ೩೧ ವರ್ಷ ವಯಸ್ಸಿನ ಲೂಕಾಸ್ ಪೊದೋಲ್‌ಸ್ಕಿ, ಜರ್ಮನಿಯ ಪರವಾಗಿ ೧೨೯ ಪಂದ್ಯಗಳನ್ನು ಆಡಿದ್ದು, ಒಟ್ಟು ೪೮ ಗೋಲು ಬಾರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಜರ್ಮನಿ ವಿಶ್ವಕಪ್ ಗೆದ್ದಿದ್ದು, ಈ ಗೆಲುವಿನಲ್ಲಿ ಲೂಕಾಸ್ ಅವರ ಪಾತ್ರ ಹಿರಿದಾಗಿತ್ತು.

Comments are closed.