ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಾಲು ಪಕ್ಕದಲ್ಲೆ ನಿಂಬೆ ಹಣ್ಣು ಪತ್ತೆ….

ಅಥಣಿಯಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಾಲು ಪಕ್ಕದಲ್ಲೆ ನಿಂಬೆ ಹಣ್ಣು ಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿದೆ.

ಕಾಗವಾಡ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತುಗಶಟ್ಟಿ ಪರ ಪ್ರಚಾರಕ್ಕೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಆಗಮಿಸಿದ್ದರು. ಹೆಲಿಪ್ಯಾನಲ್ಲಿ ಇಳಿದ ನಂತರ ಕಾಲಿನ ಪಕ್ಕದಲ್ಲೆ ಬಿದ್ದ ನಿಂಬೆ ಹಣ್ಣು ಬಿದ್ದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಎಚ್. ಡಿ. ಕುಮಾರಸ್ವಾಮಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ  ವೇಳೆ ಕಾಲಲ್ಲಿಯೇ ಪತ್ತೆಯಾದ ಲಿಂಬೆ ಹಣ್ಣು ಪತ್ತೆಯಾಗಿದೆ. ವಿಷಯ ತಿಳಿದು ಜನರು ಗಾಬರಿಯಾಗಿದ್ದು ಕಂಡುಬಂದಿದೆ.

ಅಲ್ಲದೇ ಕುಮಾರಸ್ವಾಮಿ ಹೆಲಿಕಾಪ್ಟರ್ ನಿಂದ ಇಳಿಯುತ್ತಲೆ 2 ಲಿಂಬೆ ಹಣ್ಣು ಹಿಡಿದಿದ್ದರು ಎನ್ನಲಾಗಿದೆ. ಕೋನರೆಡ್ಡಿ ಮತ್ತು ಕಾರ್ಯಕರ್ತ ಕುಮಾರಸ್ವಾಮಿ ಕೈಗೆ 2 ಲಿಂಬೆಹಣ್ಣು ಕೊಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಒಂದು ಲಿಂಬೆ ಹಣ್ಣು ಕೆಳಗೆ ಬಿದ್ದಿದೆ. ಬಳಿಕ ಲಿಂಬೆ ಹಣ್ಣಿನ ವಿಚಾರ ಬಯಲಾಗಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

 

Leave a Reply