ಫ್ರೀ ಕಾಶ್ಮೀರ – ನಳಿನಿ ಪರ ವಕಾಲತ್ತು ವಹಿಸದೇ ಇರುವುದು ಅಸವಿಂಧಾನಕ – ಸಿದ್ಧರಾಮಯ್ಯ

ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ ಪ್ರಕರಣದಲ್ಲಿ ನಳಿನಿ ಪರ ವಕಾಲತ್ತು ವಹಿಸುವುದಿಲ್ಲ ಎಂಬ ವಕೀಲರ ನಿರ್ಧಾರದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ವಕೀಲರ ನಿರ್ಧಾರ ಅಸವಿಂಧಾನಕವಾದದು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ್ದು ದೇಶದ್ರೋಹದ ಕೆಲಸವಲ್ಲ, ಕಾಶ್ಮೀರದಲ್ಲಿ ಇಂದಿಗೂ ತುರ್ತು ಪರಿಸ್ಥಿತಿ ಇದೆ. ಅದರಿಂದ ಮುಕ್ತಿ ಸಿಗಬೇಕೆಂಬ ಭಾವನೆಯಲ್ಲಿ ನಳಿನಿ ಪ್ಲೇ ಕಾರ್ಡ ಪ್ರದರ್ಶಿಸಿರಬಹುದು ಎಂದು ಹೇಳಿದರು.

ಇನ್ನು ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಸಾಲ ವಸೂಲಿ ಮಾಡಬಾರದು, ಒಂದು ವೇಳೆ ರೈತರಿಗೆ ತೊಂದರೆ ಕೊಟ್ಟರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.