ಮೈಸೂರಿನಿಂದ ಬೆಂಗಳೂರಿಗೂ ಕಾಲಿಟ್ಟ ಫ್ರೀ ಕಾಶ್ಮೀರದ ಕೂಗು : ಖಾಕಿ ಸ್ವಯಂಪ್ರೇರಿತ ದೂರು

ಬೆಂಗಳೂರಿನಲ್ಲಿ ಕಿಡಿಗೇಡಿಗಳು ರಾತ್ರೋ ರಾತ್ರಿ ‘ಫ್ರೀ ಕಾಶ್ಮೀರ’ ಎಂದು ಬರೆದಿದ್ದು, ಬರೆದವರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಚರ್ಚ್ ಸ್ಟೀಟ್ ಅಂಗಡಿಗಳ ಶೆಟ್ಟರ್ ಗಳ ಮೇಲೆ ‘ಫ್ರೀ ಕಾಶ್ಮೀರ’ ‘ಮೋದಿ ಡೈ”ನೋ ಸಿಎಎ’ ನೋ ಎನ್ ಆರ್ ಸಿ’ ಎಂದು ಬರೆಯಲಾಗಿದೆ.

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ತುಂಬಾ ಕಡೆ ‘ಫ್ರೀ ಕಾಶ್ಮೀರ್ ‘ ‘ಮೋದಿ ಡೈ’ ಎಂದ ಬರೆಯಲಾಗಿದ್ದು, ಇದನ್ನ ಒಬ್ಬರು ಬರೆಯಲು ಸಾಧ್ಯವಿಲ್ಲ ಎಂದು ಅನುಮಾನಿಸಲಾಗಿದೆ. ಹಾಗಾದ್ರೆ ಇದನ್ನ ಬರೆದವರು ಅನೇಕ ಜನ ಕಿಡಿಗೇಡಿಗಳಿದ್ದು ಅವರ ಪತ್ತೆ ಕಾರ್ಯ ನಡೆದಿದೆ.

ಚರ್ಚ್ ಸ್ಟ್ರೀಟ್ ನ ಸಿಸಿಟಿವಿಗಳ ಫೋಟೇಜ್ ಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದಾರೆ.