Golden girl : ಆರನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಚಿನ್ನದ ಹುಡುಗಿ ಹಿಮಾ ದಾಸ್….

ಚಿನ್ನದ ಹುಡುಗಿ ಎಂದೇ ಹೆಸರಾದ ಭಾರತದ ಓಟಗಾರ್ತಿ ಹಿಮಾ ದಾಸ್ ಗೆ 6 ನೇ ಚಿನ್ನದ ಪದಕ ಒಲಿದು ಬಂದಿದೆ. ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಗ್ ರೇಟರ್ ಸ್ಪರ್ಧೆಯ 300 ಮೀಟರ್ ಓಟದ ವಿಭಾಗದಲ್ಲಿ ಅವರು ಚಿನ್ನ ಗೆದ್ದಿದ್ದಾರೆ.

ಕಳೆದ ತಿಂಗಳು ಜುಲೈ 02 ರಿಂದ ಇಲ್ಲಿಯವರೆಗೆ ಹಿಮಾದಾಸ್ ಗೆ ಒಟ್ಟು 06 ಚಿನ್ನದ ಪದಕಗಳು ಲಭಿಸಿವೆ. ಯುರೋಪಿಯನ್ ಸ್ಪರ್ಧೆಗಳಲ್ಲಿ ಇವರ ಸಾಧನೆ ಅನನ್ಯವಾಗಿದೆ.

ಕಳೆದ ತಿಂಗಳು ಯೂರೋಪ್ ನಲ್ಲಿ ಹಿಮಾ ದಾಸ್ ರವರ ಸಾಧನೆಯ ವಿವರ ಹೀಗಿದೆ.

ಜುಲೈ 02 ರಂದು ಪೋಲಾಂಡ್ ನಲ್ಲಿ ನಡೆದ ಪ್ರೊಜ್ನಾನ್ ಗ್ರ್ಯಾನ್ ಫ್ರಿ ರೇಸ್ ನಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಗೆಲುವು

ಜುಲೈ 07 ರಂದು ಪೋಲಾಂಡ್ ನಲ್ಲಿ ನಡೆದ ಕುಂಟೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಸಾಧನೆ

ಜುಲೈ 13 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ಕ್ಲಾಡೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಪದಕ

ಜುಲೈ 17 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ತಬೂರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಗೆಲುವು

ಜುಲೈ 20 ರಂದು ಪ್ರಾಗ್ ನಲ್ಲಿ ನಡೆದ ನೊವಾ ಮೆಸ್ಟೊ ಅಥ್ಲೆಟಿಕ್ ಕೂಟದಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

Leave a Reply

Your email address will not be published.