ನಕಲಿ ಸಹಿ ಹಾಕಿ ಪಿಂಚಣಿ ಹಣ ಗುಳುಂ : ಅಂಗವಿಕಲರು, ವೃದ್ದರು, ವಿಧವೆಯರು ಕಂಗಾಲು…..

ಅವ್ರೆಲ್ಲ ಸರ್ಕಾರದ ಮಾಶಾಸನ ನಂಬಿ ಬದುಕುತ್ತಿರೋ ಬಡ ಜೀವಗಳು. ವೃದ್ದರು, ಅಂಗವಿಕಲರು, ವಿಧವೆಯರಿಗೆ ಸರ್ಕಾರ ಪ್ರತಿ ತಿಂಗಳು ಮಾಶಸನ ಕೊಡುತ್ತೆ. ಈ ಮಾಶಾಸನ ನಂಬಿಕೊಂಡು ಅದೆಷ್ಟೋ ಬಡ ಜೀವಗಳು ಜೀವನ ಮಾಡ್ತಿವೆ.ಆದ್ರೆ‌ ಸರ್ಕಾರ ಕೊಡೋ ಈ‌ ಮಾಶಾಸನಕ್ಕೆ ಕೆಲವರು ಕತ್ತರಿ ಹಾಕ್ತಿದ್ದು ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ದು ಅಲ್ದೆ ಫಲಾನುಭವಿಗಳಿಗೂ ಯಾಮಾರಿಸಿದ್ದಾರೆ. ಬಡವರು‌ ಮತ್ತು ನಿರ್ಗತಿಕರಿಗೆ ಸೇರಬೇಕಾದ ಪಿಂಚಿಣಿ ಹಣವನ್ನು ನುಂಗಿ ನೀರು ಕುಡಿದು ಲಕ್ಷಾಂತರ ರೂ ವನ್ನು ಗೋಲ್ಮಾಲ್ ಮಾಡಿದ್ದಾರೆ.

ಹೌದು! ಸರ್ಕಾರ ವೃದ್ದರು,ಅಂಗವಿಕಲರು ಮತ್ತು ವಿಧವೆಯರಿಗೆ ಪ್ರತಿತಿಂಗಳು ಅಂಚೆ ಕಚೇರಿ ಮತ್ತು ಬ್ಯಾಂಕ್ ಪಿಂಚಿಣಿ ನೀಡ್ತಿದೆ.ಆದ್ರೆ ಪಿಂಚಿಣಿಯಲ್ಲೂ ಕೂಡ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು,ಅಂಚೇಕಚೇರಿಯ ಸಿಬ್ಬಂದಿಗಳು ಈ ಫಲಾನು ಭವಿಗಳಿಗೆ ಸರಿಯಾಗಿ ಪಿಂಚಿಣಿ ತಲುಪಿಸ್ತಿಲ್ಲ ಅನ್ನೋ ಆರೋಪ ಸಕ್ಕರೆನಾಡು ಮಂಡ್ಯದಲ್ಲಿ ಕೇಳಿ ಬಂದಿದೆ. ಸರ್ಕಾರ ವೃದ್ದರಿಗೆ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಕೊಡುವ ಪಿಂಚಣಿ ಹಣವನ್ನು ಮಂಡ್ಯದ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮದ ಪೋಸ್ಟ್ ಆಫೀಸ್ ನ ಮಹಿಳಾ ಪೋಸ್ಟ್ ಮಾಸ್ಟರ್ ರೇಖಾ ಎನ್ನುವ ಸಿಬ್ಬಂದಿ ನೂರಾರು ಫಲಾನುಭವಿಗಳಿಗೆ ವಿತರಿಸಬೇಕಿದ್ದ ಲಕ್ಷಾಂತರ ರೂ ಪಿಂಚಣಿ ಹಣವನ್ನು ತಿಂಗಳಿಗೆ ಸರಿಯಾಗಿ ವಿತರಿಸಿದೆ ನಾಲ್ಕೈದು ತಿಂಗಳಿಗೆ ಒಮ್ಮೆ ಕಿಟ್ಟು ಉಳಿದ ತಿಂಗಳ ಹಣವನ್ನು ನಕಲಿ ಫಲಾನುಭವಿಗಳ ಹೆಬ್ಬೆಟ್ಟು ಮತ್ತು ನಕಲಿ ಸಹಿ ಮಾಡಿ ಡ್ರಾ ಮಾಡಿಕೊಂಡು ತಿಂದ ತೇಗಿದ್ದಾರೆ. ತಿಂಗಳಿಗೆ ಸರಿಯಾಗಿ ಪಿಂಚಣಿ ಕೊಡದ ಕಾರಣ ಈ ಪಿಂಚಿಣಿ ಹಣ ನಂಬಿ ಜೀವನ‌ ಮಾಡ್ತಿರೋ ಈ ಫಲಾನುಭವಿಗಳು ಔಷಧೋಪಚಾರಕ್ಕು ಹಣವಿಲ್ಲದೆ ಪರದಾಡ್ತಿದ್ದಾರೆ. ಅಶಕ್ತರಾದ ನಮಗೆ ನ್ಯಾಯಕೊಡಿಸಿ ಅಂತಿದ್ದು , ನನ್ನ ವಿರುದ್ದ ದೂರು ಕೊಟ್ರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳಾ ಪೋಸ್ಟ್ ಮಾಸ್ಟರ್ ಎದರಿಸಿದ್ದು, ನಾವು ಇದ್ರಿಂದ ಕಂಗಾಲಾಗಿದ್ದೀವಿ ಅಂದ್ರೆ,ಊರಿನವರು ಈ ಭ್ರಷ್ಟ ಸಿಬ್ಬಂದಿಯ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರ

ಇನ್ನು ಈ‌ ಅಂಚೆ ಕಚೇರಿಯಲ್ಲಿ ಫಲಾನುಭವಿಗಳ ಲಕ್ಷಾಂತರ ಹಣವನ್ನು ಈ ಮಹಿಳಾ ಪೋಸ್ಟ್ ಮಾಸ್ಟರ್ ರೇಖಾ ವಂಚನೆ ಮಾಡಿದ್ರು ನಾನೇನು ತಪ್ಪು ಮಾಡಿಲ್ಲ. ಇದ್ರಲ್ಲಿ ಪೋಸ್ಟ್ ಮ್ಯಾನ್ ಕೈವಾಡ ಇದೆ. ನನಗೇನು ಇದರ ಬಗ್ಗೆ ಗೊತ್ತಿಲ್ಲ ಎಂದು ನಾಟಕ ಆಡ್ತಿದ್ದು ತಾನು ಮಾಡಿರೋ ಈ ಮಹಾನ್ ಕಾರ್ಯವನ್ನು ಪೋಸ್ಟ್ ಮ್ಯಾನ್ ಮೇಲೆ ಹೊತ್ತು ಹಾಕಿ ಕೈ ತೊಳೆದುಕೊಳ್ಳುವ ಪ್ರಯತ್ನ‌ ಮಾಡ್ತಿದ್ದಾಳೆ.ಇನ್ನು ಈ ಮಹಿಳಾ ಪೋಸ್ಟ್ ಮಾಸ್ಟರ್ ನ ಭ್ರಷ್ಟಾಚಾರ ಗೊತ್ತಿದ್ರು ಅದೇಕೋ ಅಂಚೆ ಕಚೇರಿಯ ಮೇಲಧಿಕಾರಿಗಳು ಈಕೆಯ ವಿರುದ್ದ ಕ್ರಮ ಕೈಗೊಳ್ತಿಲ್ಲ. ಈ ಬಗ್ಗೆ ಮಂಡ್ಯ ಅಂಚೇ ಕಚೇರಿಯ ಅಧೀಕ್ಷ ಶಿವಾನಂದ ಈ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಈಗಷ್ಟೆ ಬಂದಿದ್ದೇನೆ.ಲಿಖಿತವಾಗಿ ದೂರು ಕೊಟ್ರೇ ಕ್ರಮ ಕೈಗೊಳ್ತೇವಿ ಅಂತಿದ್ದು ಆರೋಪ ಸತ್ಯವಾಗಿದ್ರೆ ಕ್ರಮ ಕೈಗೊಳ್ತಿವಿ ಅಂತಿದ್ದಾರೆ.

ಒಟ್ಟಾರೆ ಅಂಚೆ ಇಲಾಖೆ ವತಿಯಿಂದ ವಿತರಿಸಲಾಗ್ತಿರೋ ಈ ಪಿಂಚಣಿ ಹಣದ ವಿಚಾರದಲ್ಲಿ ಜಿಲ್ಲೆಯಾ ದ್ಯಂತ ಸಾಕಷ್ಟು ಪೋಸ್ಟ್ ಮಾಸ್ಟರ್ ಗಳಿಂದ ಸಾಕಷ್ಟು ಗೋಲ್ಮಾಲ್ ನಡೆದಿರೋ ಆರೋಪ‌ ಕೇಳಿ ಬಂದಿದೆ.ಇದ್ರಿಂದ ಸರಿಯಾಗಿ ಫಲಾನುಭವಿಳಿಗೆ ಹಣ ಸಿಗದೆ ಔಷಧೋಪಚಾರಕ್ಕೂ ಹಣವಿಲ್ಲದೆ ಪರದಾಡ್ತಿದ್ದು ಕಂಗಾಲಾಗಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೆತ್ತು ಇಂತಹ ಭ್ರಷ್ಟರಿಗೆ ಕಡಿವಾಣ ಹಾಕಿಬೇಕಿದೆ.

 

Leave a Reply