ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಹರಿಹರ ಸ್ವಾಮೀಜಿ ವಿರುದ್ಧ ಯತ್ನಾಳ ವಾಗ್ದಾಳಿ…

ಹರಿಹರ ಸ್ವಾಮೀಜಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಸ್ವಾಮಿಜಿಯವರು  ವರ್ತನೆ ತಿದ್ದಿಕೊಳ್ಳಬೇಕೆಂದು ಹರಿಹರ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ‌ ಬಸನಗೌಡ ರಾ. ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ನಿನ್ನೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, “”ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೇ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ” ಎಂದು ಹೇಳಿದರು. ಇದಕ್ಕೆ ಸಿಎಂ ಯಡಿಯೂರಪ್ಪ ಕೆಂಡಮಂಡಲವಾಗಿ ಎಚ್ಚರಿಕೆ ಬೇಡ ಸಲಹೆ ಕೊಂಡಿ ಎಂದು ಕೋಪಗೊಂಡಿದ್ದರು.

ಇದೇ ವಿಚಾರಕ್ಕೆ ಇಂದು ಯತ್ನಾಳ್ ಗರಂ ಆಗಿದ್ದಾರೆ . ಇಂದು ಮಾದ್ಯಮದೊಂದಿಗೆ ಮಾತನಾಡಿದ ಯತ್ನಾಳ್, ಯಾರೂ ಗೊಡ್ಡ ಬೆದರಿಕೆ ಹಾಕಬಾರದು. ನಾವೆಲ್ಲ ಸಿಎಂ‌ ಪರ ಗಟ್ಟಿಯಾಗಿದ್ದೇವೆ. ಮಠಾಧೀಶರಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ನೋಡಬೇಕು. ನನಗೂ ಸಚಿವನಾಗಲು ಅರ್ಹತೆ ಇದೆ. ಆದರೆ, ನಾನು ಸಚಿವ ಸ್ಥಾನ ಬೇಡಲ್ಲ. ಸಿಎಂ ರನ್ನು‌ ಕಾರ್ಯಕ್ರಮಕ್ಜೆ ಅವಮಾನಿಸಿದ್ದು ಸರಿಯಲ್ಲ.”

ಈ ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರಂಥ ಲಿಂಗಾಯಿತ ನಾಯಕರಿಗೆ ನಮ್ಮವರೇ ಮುಳುವಾದರು. ಉತ್ತರ ಕರ್ನಾಟಕ ಪ್ರವಾಹ ಬಂದಾಗ ಸ್ವಾಮೀಜಿ ಯಾಕೆ ಧ್ವನಿ ಎತ್ತಲಿಲ್ಲ. ಇಂಥವರ ಮಾರ್ಗದರ್ಶನದಲ್ಲಿ ಸಚಿವರಾದರೆ ಪ್ರತಿದಿನ ಇವರ ಮಠದ ಎದುರು ನಿಲ್ಲಬೇಕಾಗುತ್ತೆ. ನಿನ್ನೆ ನಿರಾಣಿ ಮಾಡಿದ್ದು ತಪ್ಪು. ನಿರಾಣಿ ಸಿಎಂಗೆ ತಂದೆ ಸಮಾನ ಅಂತಾರೆ. ಹಾಗಿದ್ದರೆ ಹೀಗೇಕೆ‌ ಮಾಡಿದ್ರು? ನಿರಾಣಿ ಕೂಡಲ ಸಂಗಮ, ಹರಿಹರ ಎರಡೂ ಮಠಗಳನ್ನು ನಿಭಾಯಿಸಲು ಹೊರಟಿದ್ದಾರೆ.

ನಿರಾಣಿ ಮತ್ತು ಸ್ವಾಮೀಜಿಗಳ ಈ ನಡೆಯನ್ನು ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಇಬ್ಬರು ನಿರಾಣಿ ಸಹೋದರರು‌ ಕೂಡಲ ಸಂಗಮ ಮ್ಯಾನೇಜ್ ಮಾಡ್ತಿದ್ದಾರೆ. ಮುರುಗೇಶ ನಿರಾಣಿ ಹರಿಹರ ಪರ ಮ್ಯಾನೇಜ್ ಮಾಡ್ತಿದ್ದಾರೆ. ನಿರಾಣಿ ಅವರ ಮನೆಯ ಬೆಕ್ಕು,ನಾಯಿಗೂ ಸ್ಥಾನಮಾನ ಕೇಳುತ್ತಾರೆ. ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗ್ಬೇಕಾ? ನಿರಾಣಿ ಏನು ಉಪಕಾರ ಮಾಡಿದ್ದಾರೆ? ನಾಲ್ಕೈದು ಸಕ್ಕರೆ ಕಾರ್ಖಾನೆ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.