‘ಅವನೊಬ್ಬ ಮೂರ್ಖ ಮುಖ್ಯಮಂತ್ರಿ’ : ಹೆಚ್ ಡಿಕೆ ವಿರುದ್ಧ ಬಿಎಸ್ ವೈ ಆಕ್ರೋಶ

‘ಅವನೊಬ್ಬ ಮೂರ್ಖ ಮುಖ್ಯಮಂತ್ರಿ. ಮಂಡ್ಯದಲ್ಲಿ ತನ್ನ ಪುತ್ರ ಸೋಲುತ್ತಾನೆ ಅನ್ನೋ ಭಯದಿಂದ ಏನೇನೋ ಮಾತನಾಡುತ್ತಿದ್ದಾರೆ’ ಎಂದು  ಹೆಚ್ ಡಿಕೆ ವಿರುದ್ಧ ಬಿಎಸ್ ವೈ ಕಿಡಿಕಾರಿದ್ದಾರೆ.

‘ತಿನ್ನಲು ಅನ್ನ ಇಲ್ಲದವರು ಸೇನೆ ಸೇರುತ್ತಾರೆ’ ಎನ್ನುವ ಹೇಳಿಕೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಬೇಜವಬ್ದಾರಿ ಹೇಳಿಕೆಗಳನ್ನು ಬಹಿರಂಗ ಮಾಡಿದ್ದ ಬಿಜೆಪಿಗೆ ಕುಮಾರಸ್ವಾಮಿ ಈ ಆಡಿಯೋ ಫೇಕ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ಹಳೆಯ ಟ್ರಿಕ್ಸ್ ಬಳಕೆ ಮಾಡಿ ಆಡಿಯೋ ಎಡಿಟ್ ಮಾಡಿದ್ದಾರೆ ಎನ್ನುವ ಸಮರ್ಥನೆ ಸಿಎಂ ಟ್ವೀಟ್ ಮಾಡಿದ್ದರು.

ಇದಕ್ಕೆ ಮಾದ್ಯಮದವರಿಗೆ ಪ್ರತಿಕ್ರಿಯಿಸಿದ ಬಿ.ಎಸ್ ಯಡಿಯೂರಪ್ಪ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅವನೊಬ್ಬ ಮೂರ್ಖ ಮುಖ್ಯಮಂತ್ರಿ. ಸುಮಲತಾ ಗೆಲ್ತಾರೆ ಅನ್ನೋ ಭಯದಲ್ಲಿ ಹುಚ್ಚರಂತೆ ಮಾಡನಾಡುತ್ತಿದ್ದಾರೆ. ಗುಂಡಾಗಿರಿ ಮಾಡ್ತಾಯಿದ್ದಾರೆ. ತಾನೊಬ್ಬ ಸಿಎಂ ಅನ್ನೋದನ್ನ ಮರೆತು ಬಾಯಿಗೆ ಬಂದಂಗೆ ಮಾತನಾಡುತ್ತಾರೆ’ ಎಂದು ಯಡಿಯೂರಪ್ಪ ವಾಗ್ದಾಳಿ ಮಾಡಿದ್ದಾರೆ.

ಭಾರತೀಯ ಸೇನೆಯ ಬಗ್ಗೆ ಬೇಜವಬ್ದಾರಿಯುತ ಹೇಳಿಕೆ ನೀಡಿದ್ದಾರೆ. ನಂತರ ಅದರಿಂದ ನುಣಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನೆಲ್ಲಾ ಜನ ನೋಡುತ್ತಿದ್ದಾರೆ. ತಕ್ಕ ಪಾಠ ರಾಜ್ಯದ ಜನ ಕಲಿಸುತ್ತಾರೆ ಎಂದು ಹೆಚ್ ಡಿಕೆ ವಿರುದ್ದ ಬಿಎಸ್ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Leave a Reply

Your email address will not be published.