ಹೆಮ್ಮಾರಿ ಅಟ್ಟಹಾಸ ಶಮನ : ತಾಯಿನಾಡಿನಿಂದ ಕಾಲ್ಕಿತ್ತ ಕೊರೊನಾ..?

ತಾಯಿನಾಡಿನಿಂದ ಕೊರೊನಾ ಕಾಲ್ಕಿತ್ತಿದೆಯಾ ಎನ್ನುವ ಅನುಮಾನ ಸದ್ಯ ಎಲ್ಲರನ್ನು ಸಂತೋಷದತ್ತ ಕರೆದೊಯ್ಯುತ್ತಿದೆ.

ಹೌದು.. ಕಳೆದ 24 ಗಂಟೆಯಿಂದ ಕೊರೊನಾ ಸೋಂಕು ಇರುವ ವ್ಯಕ್ತಿಗಳು ಹುಟ್ಟೂರು ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಇಡೀ ವಿಶ್ವವೇ ಕೊಂಚ ನೆಮ್ಮದಿಯಾ ನಿಟ್ಟುಸಿರು ಬಿಟ್ಟಿದೆ. ವಿಶ್ವಾದ್ಯಂತ ಆತಂಕಕ್ಕೀಡು ಮಾಡಿರುವ ಮಾರಕ ಕೊರೊನಾದ ಕೇಂದ್ರ ಬಿಂದು ಎನಿಸಿದ ಚೀನಾದಲ್ಲಿ ಇದೇ ಮೊದಲು ಒಂದೇ ಒಂದು ಕೋವಿಡ್-19 ಸೋಂಕಿನ ಪ್ರಕರಣ ವರದಿಯಾಗಿದೆ. ಇದು ಮಹಾಮಾರಿ ಸೋಂಕು ಶಮನಗೊಳ್ಳುವ ಮುನ್ಸೂಚನೆಯಾಗಿದೆ.

ಕೊರೊನಾ ಹುಟ್ಟೂರು ಹೆಬೀ ಪ್ರಾಂತ್ಯದ ವುಹಾನ್ ಸೇರಿದಂತೆ ಚೀನಾದ ಯಾವುದೇ ಭಾಗದಲ್ಲಿ ಕಳೆದ 24 ತಾಸುಗಳಲ್ಲಿ ಯಾವುದೇ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಕಳೆದ ಮೂರು ತಿಂಗಳಿನಿಂದ ಚೀನಾದಲ್ಲಿ ಪ್ರತಿ ದಿನ ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇತ್ತು.

ಮಾತ್ರವಲ್ಲದೇ ಕಳೆದ ಒಂದು ವಾರದಿಂದ ಸೋಂಕು ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈಗಾಗಲೇ ಕೋಂಕು ತಗುಲಿದ್ದವರಲ್ಲಿ ಮತ್ತೆ ಎಂಟು ಮಂದಿ ಮೃತಪಟ್ಟಿದ್ದು, ಕೊರೊನಾ ಕ್ರೌರ್ಯಕ್ಕೆ ಈವರೆಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 3,245ಕ್ಕೇರಿದೆ.

ಚೀನಾದಲ್ಲಿ ಸ್ಥಳೀಯ ಸೋಂಕು ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿದ್ದು, 24 ತಾಸುಗಳ ಅವಧಿಯಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ಮೊನ್ನೆ 34 ಮಂದಿಯಲ್ಲಿ ಸೊಂಕು ಕಾಣಿಸಿಕೊಂಡಿದೆಯಾದರೂ ಅವರೆಲ್ಲರೂ ವಿದೇಶಗಳಿಂದ ಬಂದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.