ಹೆಂಗವ್ನೆ ಶ್ರೀಮನ್ನಾರಾಯಣ..? : ಚಳಿಗೆ ಬಿಸಿ ಮುಟ್ಟಿಸಿದ ‘ಅವನೇ ಶ್ರೀಮನ್ನಾರಾಯಣ’ ಭರ್ಜರಿ ತೆರೆಗೆ

ಸಿನೆಮಾ ಶುರುವಾದಾಗಿನಿಂದ ಟೀಸರ್,ಟ್ರೈಲರ್,ಪೋಸ್ಟರ್,ಹ್ಯಾಂಡ್ಸಪ್ ಸಾಂಗ್ ಹೀಗೆ ಸಾಕಷ್ಟು ವಿಚಾರದಲ್ಲಿ ಸುದ್ದಿ ಮಾಡ್ತಿದ್ದ ನಾರಾಯಣ ಕೊನೆಗೂ ಭಕ್ತರಿಗೆ ದರ್ಶನ ಕೊಟ್ಟಾಯ್ತು. ಚುಮು-ಚುಮು ಚಳಿಯಲಿ ಫಸ್ಟ್ ಶೋ ನೋಡಿದ ಸಿನಿಪ್ರಿಯರಿಂದ ಹಾಟ್ ರೆಸ್ಪಾನ್ಸ್ ಸಿಕ್ತಿದೆ. ಹೌದು ಎರಡ್ಮೂರು ವರ್ಷಗಳಿಂದ ಕಾಯಿಸಿದ್ದ ‘ಅವನೇ ಶ್ರೀಮನ್ನಾರಾಯಣ’ನ ಹೊಸ ಲೋಕ ಬೇರೆಯದ್ದೇ ಇದೆ.

ಈ ಲೋಕ ಸೃಷ್ಠಿಗಾಗಿ ನ್ಯಾಚುರಲ್ ಸೆಟ್ ನಿರ್ಮಾಣದ ಶ್ರಮ ಪ್ರತೀ ದೃಷ್ಯದಲ್ಲೂ ಕಾಣ್ತಿದೆ. ಚಿತ್ರರಂಗದಲ್ಲಿ ಕೂತ ಪ್ರೇಕ್ಷಕರನ್ನ ಅಮರಾವತಿಗೆ ಕರೆದೊಯ್ದ ಅಭೀರನ ಗುಂಡಿನ ಸದ್ದಿನಿಂದ ಶುರುವಾಗೋ ಕಥೆಗೆ ಜಯರಾಮ ಹಾಗೂ ತುಕಾರಾಮನ ಕಥೆ ಹೇಳ್ತಾ ‘ಅವನ’ ಎಂಟ್ರಿಯಾಗತ್ತೆ. 15 ವರ್ಷಗಳಿಂದ ಸಿಗದ ನಿಧಿಯ ಹುಡುಕಾಟವೇ ಸಿನೆಮಾದ ಒನ್ ಲೈನ್ ಸ್ಟೋರಿ.

ಅಮರಾವತಿಯಲ್ಲಿ ಸಿಗೂಢ ನಿಧಿಗಾಗಿ ಹುಡುಕಾಟವಾಗ್ತಿದ್ದಾಗ ನಾರಾಯಣ(ರಕ್ಷಿತ್ ಶೆಟ್ಟಿ) ಎಂಬ ಪೊಲೀಸ್ ಎಂಟ್ರಿಯಾಗತ್ತೆ.ಕಿಲಾಡಿ ಮತ್ತು ಚಾಲಾಕಿ ಪೊಲೀಸ್ ನ ಬುದ್ದಿವಂತಿಕೆಯ ನಿಧಿಯ ಹುಡುಕಾಟದ ನಡುವೆ, ಜಯರಾಮ,ತುಕಾರಾಮರ ಪಟ್ಟಕ್ಕಾಗಿ ನಿಧಿಯ ಹುಡುಕಾಟದ ಅನಿವಾರ್ಯತೆಯ ತಿಕ್ಕಾಟವೇ ಅವನೇ ಶ್ರೀಮನ್ನಾರಾಯಣ.ಜರ್ನಲಿಸ್ಟ್ ಆಗಿ ಲಕ್ಷ್ಮಿ( ಶಾನ್ವಿ ಶ್ರೀವಾತ್ಸವ್), ಇಷ್ಟ ಆದ್ರೆ, ಜಾಣತನ,ಕಾಮಿಡಿ,ಪಂಚಿಂಗ್ ಡೈಲಾಗ್,ಸಾಹಸ ಗಳು ಪ್ರೇಕ್ಷಕನನ್ನ ಹಿಡಿದಿಡುತ್ವೆ.

ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಗುರುದತ್ತ್, ವಸಿಷ್ಠ, ಇಮ್ರಾನ್ ಸರ್ದಾರಿಯಾ, ಕೆ.ಮಂಜು ಸೇರಿದಂತೆ ಚಿತ್ರರಂಗ ಕಲಾವಿದರು, ತಂತ್ರಜ್ಞರು ಚಿತ್ರ ನೋಡಿದವರೆಲ್ಲಾ ಶೆಟ್ರಿಗೆ ಹ್ಯಾಟ್ಸಪ್ ಹೇಳಿದ್ದಾರೆ.