ಕೊರೊನಾ ತಡೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ವಿಧಾನ….

ಕೊರೊನಾ… ಕೊರೊನಾ… ಕೊರೊನಾ… ವಿಶ್ವದ ಪ್ರತಿಯೊಬ್ಬರಲ್ಲೂ ಮಾರಣಾತಿಂಕ ಕೊರೊನಾ ವೈರಸ್ ದ್ದೇ ಮಾತು, ಭಯ, ಹರಡುವ ಆಂತಕ. ಡೆಡ್ಲಿ ಕೊರೊನಾಗೆ ಔಷಧಿ ಇಲ್ಲ. ದೇಹ ಸೇರಿದ್ರೆ ಬದುಕೋ ಗ್ಯಾರೆಂಟಿ ಇಲ್ಲ. ಹೀಗಾಗಿ ಜನ ಕೊರೊನಾ ಅಂದ್ರೆ ಸಾಕು ಮನೆ ಒಳಗೆ ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಈ ಮಹಾಮಾರಿಗೆ ಔಷಧಿಯಿಲ್ಲ. ಆದರೆ ಇದನ್ನ ತಡೆಗಟ್ಟೋಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. ಈ ರೋಗನಿರೋಧಕ ಶಕ್ತಿ ಹೇಗೆ ಪಡೆದುಕೊಳ್ಳುವುದು ಗೊತ್ತಾ..? ಇದಕ್ಕುತ್ತರ ಇಲ್ಲಿದೆ ನೋಡಿ.

ಹೌದು..ಸಾಮಾನ್ಯವಾಗಿ ಕೊರೊನಾ ಸೋಂಕು ಹರಡೋದು ವೃದ್ಧರಲ್ಲಿ ಹಾಗೂ ಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಎಂದು ವೈದ್ಯಕೀಯ ವರದಿಗಳು ಹೇಳುತ್ತದೆ. ಹಾಗಾದ್ರೆ ರೋಗ ನಿರೋಧಕ ಶಕ್ತಿ ಇರುವ ಆಹಾರಗಳನ್ನ ನಾವುಗಳು ಕಟ್ಟುನಿಟ್ಟಾಗಿ ಸೇವಿಸಬೇಕು. ಹಾಗಾದ್ರೆ ಯಾವ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತೆ ಅನ್ನೋದನ್ನ ನೋಡೋಣ.

ಕ್ಯಾರೆಟ್ – ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಕ್ಯಾರೆಟ್ ನೀಡಲು ಶಕ್ತವಾಗಿದೆ ಎಂದು ನಿಮಗೆ ಗೊತ್ತಿತ್ತೇ? ಇದರಲ್ಲಿ ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಗಂಧಕ, ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಇದ್ದು ಮೂಳೆಗಳನ್ನು ದೃಢಗೊಳಿಸುತ್ತದೆ. ನಿತ್ಯವೂ ಕ್ಯಾರೆಟ್ಟುಗಳನ್ನು ಸೇವಿಸುವ ಮೂಲಕ ನಿತ್ಯದ ಖನಿಜಗಳ ಅಗತ್ಯತೆಯನ್ನು ಪೂರೈಸಬಹುದು.ಕ್ಯಾರೆಟ್ಟುಗಳಲ್ಲಿರುವ ಬೀಟಾ ಕ್ಯಾರೋಟೀನ್ ಒಂದು ಪ್ರಬಲ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಆಗಿದ್ದು ನಮ್ಮ ದೇಹಗಳನ್ನು ಆಮ್ಲಜನಕದ ಕಣಗಳಿಂದ ಪ್ರೇರಿತವಾದ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ. ಕ್ಯಾರೆಟ್ಟುಗಳ ರಸವನ್ನು ಕೆಲವಾರು ವ್ಯಾಧಿಗಳಿಗೆ ಔಷಧಿಯ ರೂಪದಲ್ಲಿ ಸೇವಿಸಲಾಗುತ್ತದೆ. ವಾಸ್ತವದಲ್ಲಿ ಕ್ಯಾರೆಟ್ಟುಗಳನ್ನು ತರಕಾರಿಯಾಗಿ ಬಳಸುವ ಮುನ್ನವೇ ಔಷಧಿಗಾಗಿ ಬೆಳೆಯಲಾಗುತ್ತಿತ್ತು. ತರಕಾರಿಗಿಂತಲೂ ಮುನ್ನವೇ ಹಲವು ವ್ಯಾಧಿಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.

ಸೇಬು -ಸೇಬಿನಲ್ಲಿರುವ ಪೋಷಕಾಂಶಗಳ ವಿವರ

*ಪ್ರತಿ ನೂರು ಗ್ರಾಂ ಸೇಬುಹಣ್ಣಿನಲ್ಲಿ 54 ಕಿಲೋಕ್ಯಾಲೋರಿ ಶಕ್ತಿ ಇದೆ. ಉಳಿದಂತೆ ಇದರಲ್ಲಿರುವ ಇತರ ಪೋಷಕಾಂಶಗಳೆಂದರೆ *0.41 ಗ್ರಾಂ ಪ್ರೋಟೀನ್ *14.05 ಗ್ರಾಂ ಕಾರ್ಬೋಹೈಡ್ರೇಟ್ *2.1 ಗ್ರಾಂ ಕರಗುವ ನಾರು *10.33 ಗ್ರಾಂ ಸಕ್ಕರೆ *8 ಮಿಲಿಗ್ರಾಮ್ ಸಕ್ಕರೆ *0.15 ಮಿಲಿಗ್ರಾಂ ಕಬ್ಬಿಣ *107 ಮಿಲಿಗ್ರಾಂ ಪೊಟ್ಯಾಶಿಯಂ *2.0 ಮಿಲಿಗ್ರಾಂ ವಿಟಮಿನ್ ಸಿ *41ಐಯು ವಿಟಮಿನ್ ಎ ಇವೆಲ್ಲವೂ ಸೇಬುಗಳ ಆರೋಗ್ಯಕರ ಪ್ರಯೋಜನಗಳು. ಇನ್ನೂ ಸೇಬು ಹೃದಯದ ಆರೋಗ್ಯ ವೃದ್ಧಿಸುತ್ತದೆ. ತೂಕ ಕಳೆದುಕೊಳ್ಳಲು ನೆರವಾಗುತ್ತದೆ.ಮಧುಮೇಹದ ಸಾಧ್ಯತೆ ತಗ್ಗಿಸುತ್ತದೆ. ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಸ್ತಮಾ ವಿರುದ್ಧ ಹೋರಾಡಲು ನೆರವಾಗುತ್ತದೆ.ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಹೀಗೆ ಹತ್ತು ಹಲವಾರು ಪ್ರಯೋಜನಗಳನ್ನು ಹೊಂದಿರುವ ಸೇಬು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ.

ಕಿತ್ತಾಳೆ ಹಣ್ಣು –

  • 1. ಗರ್ಭಿಣಿಯರು ಆರು ತಿಂಗಳ ನಂತರ ನಿತ್ಯ ಕಿತ್ತಳೆ ಹಣ್ಣು ಸೇವಿಸಿದರೆ ಹೆರಿಗೆ ಸಮಯದಲ್ಲಿ ಅನುಕೂಲ ಹೆಚ್ಚು, ಜತೆಗೆ ಆರೋಗ್ಯ ವೃದ್ಧಿಸುತ್ತದೆ.
  • 2. ಕಿತ್ತಳೆ ದ್ರವರೂಪದ ಆಹಾರ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಕಿತ್ತಳೆ ಹಣ್ಣಿನ ರಸ ನೀಡುವುದು ಉತ್ತಮ ಕ್ರಮ.
  • 3. ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಗೊಜ್ಜು ಹಾಗೂ ಉಪ್ಪಿನಕಾಯಿ ತಯಾರಿಸಿ ಸೇವಿಸುವುದು ಉತ್ತಮ ಕ್ರಮ.
  • 4. ಕೆಮ್ಮು ಹಾಗೂ ಸೀತ ನಿವಾರಣೆಗೆ ನಿತ್ಯ ಒಂದು ಕಪ್ ಕಿತ್ತಳೆ ಹಣ್ಣಿನ ರಸ ಹಾಗೂ ಐದು ಚಮಚ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.
  • 5. ಕಿತ್ತಳೆ ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ರೋಗಗಳು ದೂರಾಗಲು ಸಾಧ್ಯ.

ನಿಂಬೆ ಹಣ್ಣು, ಶುಂಠಿ ಮತ್ತು ಜೇನು ತುಪ್ಪ ಪಾನೀಯಗಳು
ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಹೆಚ್ಚಾಗಿ ಇರುತ್ತದೆ. ಜೇನು ತುಪ್ಪದ ಜೊತೆ ಶುಂಠಿ ಮತ್ತು ನಿಂಬೆ ಹಣ್ಣಿನ ರಸ ಸೇರಿದರೆ ದೇಹದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಇಲ್ಲವಾಗಿಸುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಅಂಶವಿದ್ದು, ಇದು ಜೀರ್ಣಾಂಗದ ವ್ಯವಸ್ಥೆ ಉತ್ತಮಗೊಳಿಸಿ ಅಜೀರ್ಣತೆ ದೂರಮಾಡಲು ಸಹಕಾರಿಯಾಗಿದೆ. ಶುಂಠಿಯಲ್ಲಿ ಆಂಟಿ-ಇನ್ಫಾಮೇಟರಿ ಗುಣವಿದ್ದು ಇದು ಆರೋಗ್ಯಕ್ಕೆ ಒಳ್ಳೆಯದು.

ಇದರ ಜೊತೆಗೆ ಹೆಚ್ಚು ತರಕಾರಿಗಳು ಹಾಗೂ ಹೆಚ್ಚು ಹಣ್ಣುಗಳ ಸೇವನೆಯಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಜೊತೆಗೆ ಯಾವುದೇ ಸೋಂಕು ಹರಡದಂತೆ ಕಾಳಜಿ ವಹಿಸಬಹುದು.