ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಕಾಂಗ್ರೆಸ್‌ ಶಾಸಕನಿಗೆ ಮಾರಿದ್ದ ಹನಿಟ್ರ್ಯಾಪ್‌ ರಾಘವೇಂದ್ರ….!

ಗದಗ ಜಿಲ್ಲಾ ವ್ಯಾಪ್ತಿಯ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಬಿಡುಗಡೆ ಆಗಿ ಕೋಲಾಹಲ ಸೃಷ್ಟಿಸಿದೆ.

ಬಿಜೆಪಿ ಶಾಸಕನ್ನು ಹನಿಟ್ರ್ಯಾಪ್‌ ಗೆ ಕೆಡವಿ ಕೋಟಿ ರೂಪಾಯಿ ಹಣ ಪೀಕಿಸಿದ್ದ ಆರೋಪಿ ರಾಘವೇಂದ್ರ. ಅದೇ ವಿಡಿಯೋವನ್ನು ಕಾಂಗ್ರೆಸ್‌ ಶಾಸಕನಿಗೆ ಮಾರಾಟ ಮಾಡಿದ್ದ ಎನ್ನುವ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ. ಕಾಂಗ್ರೆಸ್‌ನ ಹಾಲಿ ಶಾಸಕ, ಮಾಜಿ ಸಚಿವರೊಬ್ಬರನ್ನು ಕೆಲವು ತಿಂಗಳುಗಳ ಹಿಂದೆ ಭೇಟಿ ಆಗಿದ್ದ ಆರೋಪಿ ರಾಘವೇಂದ್ರ ಬಿಜೆಪಿ ಶಾಸಕರ ರಾಸಲೀಲೆ ವಿಡಿಯೋದ ಸ್ಕ್ರೀನ್‌ ಶಾಟ್‌ಗಳನ್ನು ತೋರಿಸಿ ಹಣ ಕೊಟ್ಟರೆ ವಿಡಿಯೋ ನಿಮಗೆ ಕೊಡುತ್ತೇನೆ ಎಂದು ಕೇಳಿದ್ದ.

ಸ್ಕ್ರೀನ್‌ಶಾಟ್ ನೋಡಿ ಕಾಂಗ್ರೆಸ್ ಶಾಸಕ ರಾಜಕೀಯ ವಿರೋಧಿಯನ್ನು ಹಣಿಸಲು ಪ್ರಬಲ ಅಸ್ತ್ರ ಇದಾಗುತ್ತದೆಯೆಂದು ಲಕ್ಷಾಂತರ ಹಣ ಕೊಟ್ಟು ವಿಡಿಯೋವನ್ನು ಖರೀದಿಸಿದ್ದ. ವಿಡಿಯೋವನ್ನು ಉಪಚುನಾವಣೆ ಸಮಯಕ್ಕೆ ಬಿಡುಗಡೆ ಮಾಡಲೆಂದೇ ಆ ಶಾಸಕ ಖರೀದಿಸಿದ್ದ. ಯಾವುದೇ ಶಾಸಕರನ್ನು ಹನಿಟ್ರ್ಯಾಪ್ ಮಾಡಿದಾಗಲೂ ಶಾಸಕರನ್ನು ಬ್ಲಾಕ್ ಮೇಲ್ ಮಾಡಿ ಹಣ ಪೀಕಿಸುತ್ತಿದ್ದ ಜೊತೆಗೆ ಅದೇ ವಿಡಿಯೋವನ್ನು ರಾಜಕೀಯ ವಿರೋಧಿಗಳಿಗೆ ಮಾರಿ ಹಣ ಸಂಪಾದನೆ ಮಾಡುತ್ತಿದ್ದನಂತೆ ರಾಘವೇಂದ್ರ.

ರಾಘವೇಂದ್ರ ತನಿಖೆಯಿಂದ ಹಲವು ಶಾಕಿಂಗ್ ಸಂಗತಿಗಳು ಬಯಲಾಗುತ್ತಿದ್ದು, ಹನಿಟ್ರ್ಯಾಪ್‌ ಗೆ ಸಿಲುಕಿರುವ ಕೆಲವು ಶಾಸಕರುಗಳು ತಮ್ಮ ವಿಡಿಯೋವನ್ನು ಡಿಲೀಟ್ ಮಾಡುವಂತೆ ಸಿಸಿಬಿ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರಂತೆ.

Leave a Reply