ಜಿ.ನಾಗೇನಹಳ್ಳಿ ಬಳಿ ಯುವಕನ ಭೀಕರ ಹತ್ಯೆ ಪ್ರಕರಣ : ಚುರುಕುಗೊಂಡ ತನಿಖೆ

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಿ.ನಾಗೇನಹಳ್ಳಿ ಬಳಿ ನಿನ್ನೆ ಸಂಜೆ ನಡೆದಿದ್ದ ಯುವಕನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ.. ನಿನ್ನೆ ರಾತ್ರಿಯೇ ಅಲರ್ಟ್ ಆಗಿರೋ ಪೋಲಿಸರು ಹತ್ಯೆಯಾದ ಯುವಕನ ಹಿನ್ನೆಲೆ ಮುನ್ನೆಲೆ.. ಸ್ನೇಹಿತರನ್ನೆಲ್ಲಾ ವಿಚಾರಿಸುತ್ತಿದ್ದಾರೆ ಅನುಮಾನ ಬಂದವರನ್ನ ಎತ್ತಾಕ್ಕೊಂಡು ಬಂದು ವರ್ಕ್ ಮಾಡುತ್ತಿದ್ದಾರೆ.. ಇತ್ತ ಮೃತನ ಸಂಬಂಧಿಕರ ರೊಧನೆ ಮುಗಿಲುಮುಟ್ಟಿದೆ.. ಆ ಬಗ್ಗೆ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..

ಹೌದು.. ತನ್ನ ಮಡದಿಯ ಜೊತೆ ತಮ್ಮ ಗ್ರಾಮದಿಂದ ಗೊರವನಹಳ್ಳಿ ದೇವಸ್ಥಾನಕ್ಕೆ ತೆರಳಿ ಮತ್ತೆ ಬೆಂಗಳೂರಿನಕಡೆಗೆ ಹಿಂತಿರುಗುತ್ತಿದ್ದ ವೇಳೆ ಮತ್ತೊಂದು ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದ ಐದಾರು ಜನ ದುಶ್ಕರ್ಮಿಗಳು ಪ್ರೇಯಸಿ ಎದುರಲ್ಲೇ ಬರ್ಬರವಾಗಿ ನಡುರಸ್ತೆಯಲ್ಲೇ ಕೊಚ್ಚಿ ಕೊಂದು ಪರಾರಿಯಾಗಿತ್ತು.. ಮಡಕಶಿರ ಮೂಲದ ಶ್ರೀನಿವಾಸ್‌ ಮಚ್ಚಿನೇಟಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದ, ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ವಿನಲ್ಲಿ ಹೊಡೆದಿದ್ದ ಹಂತಕರು ಹೊಡೆದ ಏಟಿಗೆ ಶ್ರೀನಿವಾಸ್ ದೇಹವನ್ನ ಕೆಳಗೆ ಕೆಡವಿದ್ದರು..

ನಡು ರಸ್ತೆಯಲ್ಲೇ ಇದೊಂದು ಕೃತ್ಯವನ್ನ ನೋಡಿದ ಜನ ನಿಜಕ್ಕೂ ಬೆಚ್ಚಿಬಿದಿದ್ರು ಇನ್ನೂ ಈ ಹಿಂದೆ ಬಗಲಗುಂಟೆಯಲ್ಲಿ ಚಿಕ್ಕಪುಟ್ಟ ಗಲಾಟೆ ಮಾಡಿಕೊಂಡಿದ್ದ ಶ್ರೀನಿವಾಸ್ ಒಮ್ಮೆ ಜೈಲಿಗೂ ಹೋಗಿ ಬಂದಿದ್ನಂತೆ ಅಲ್ಲದೇ ಬಗಲುಗುಂಟೆಯಲ್ಲಿ ನಡೆದ ಮಾರಿಯಮ್ಮ ಜಾತ್ರ ಸಂದರ್ಭದಲ್ಲಿ ಅಲ್ಲಿನ ಹುಡುಗರ ಜೊತೆ ಕಿರಿಕ್ ಮಾಡಿಕೊಂಡಿದ್ನಂತೆ..ಸಾಲದ್ದಕ್ಕೆ ಶ್ರೀನಿವಾಸ್ ಮೇಲೆ ಬಗಲಗುಂಟೆ ಪೊಲೀಸರು ರೌಡಿಶೀಟರ್ ಸಹ ತೆರೆದಿದ್ದರು.. ರಸ್ತೆಬದಿ ಮೀನಿನ ಹೋಟೆಲ್ ಜೊತೆಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಶ್ರೀನಿವಾಸ್ ಕೆಲ ತಿಂಗಳ ಹಿಂದೆ ಕೆಲ ಸ್ನೇಹಿತರೊಟ್ಟಿಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರದ ಸ್ಥಳಕ್ಕಾಗಿ ಜಗಳ ಮಾಡಿಕೊಂಡಿದ್ನಂತೆ.. ಆಂಧ್ರ ಪ್ರದೇಶದ ಮಡಕಶಿರ ತಾಲೂಕಿನ ಬಿದನಕೆರೆ ಮೂಲದವನಾದ ಶ್ರೀನಿವಾಸ್ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಸದ್ಯ ಹಳೆ ದ್ವೇಷಕ್ಕೆ ಕೊಲೆಯಾಗಿದೆ ಎನ್ನಲಾಗಿದೆ.

ಇನ್ನೂ ಘಟನಾ ಸ್ಥಳಕ್ಕೆ ರಾತ್ರಿಯೇ ತುಮಕೂರು ಎಸ್ಪಿ ಡಾ.ಕೋನವಂಶಿಕೃಷ್ಣ ಭೇಟಿ ನೀಡಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಸ್ಪಿ ಗೊರವನಹಳ್ಳಿ ದೇವಾಲಯಕ್ಕೆ ಹೋಗಿದ್ದಾರೆ ಬಳಿಕ ಬೆಂಗಳೂರಿನ ಕಡೆ ಹಿಂತಿರುಗುತ್ತಿದ್ದರು, ಈ ವೇಳೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಮನಸೋ ಇಚ್ಛೆ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ., ಹುಡುಗಿಯ ವಿಚಾರಕ್ಕೆ ಕೊಲೆ ನಡೆದಿದ್ಯೋ ಅಥವಾ ಬೇರೆ ಯಾವುದಾದ್ರೂ ವಿಚಾರಕ್ಕೆ ಕೃತ್ಯ ನಡೆದಿದ್ಯೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ ಅಂತಾ ಹೇಳಿದ್ದಾರೆ.. ಅಲ್ಲದೇ ಆರೋಪಿಗಳ ಪತ್ತೆಗೆ ವಿಶೇಷ ಮೂರು ತಂಡಗಳನ್ನ ರಚಿಸಲಾಗಿದ್ದು ಅನುಮಾನ ಬಂದವರನ್ನ ಈಗಾಗಲೇ ವಿಚಾರಣೆ ಮಾಡುತ್ತಿದ್ದೇವೆ ಎಂದಿದ್ದಾರೆ..

ಒಟ್ಟಾರೆ ಈಗಾಗಲೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಶ್ರೀನಿವಾಸ್ ಸಂಸಾರದಲ್ಲಿ ಆನಂದವಾಗಿ ಇರಬೇಕಾಗಿತ್ತು.ಆದ್ರೆ ಹಳೆ ದ್ವೇಷಕ್ಕೆ ಬರ್ಬರವಾಗಿ ಹತ್ಯೆಯಾಗಿದ್ದಾನೆ.. ಇವನನ್ನೇ ನಂಬಿ ಜೊತೆಜೊತೆಯಲ್ಲೇ ಓಡಾಡಿಕೊಂಡಿದ್ದ ಅಕ್ಷತಾಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.. ಇತ್ತ ಮನೆಗೆ ಚಿಕ್ಕಮಗನಾಗಿದ್ದ ಶ್ರೀನಿವಾಸ್ ಹೆತ್ತವರ ಒಡಲಿಗೆ ಬೆಂಕಿಇಟ್ಟು ಮರೆಯಾಗಿದ್ದಾನೆ‌..