ತಂದೆ ಮಕ್ಕಳ ಆಸ್ತಿ ವಿವಾದಕ್ಕೆ ಬೀದಿಗೆ ಬಿದ್ದ ನೂರಾರು ಮಕ್ಕಳು : 70 ವರ್ಷದ ಶಾಲೆಗೆ ಕುತ್ತು

ಅದು 70 ವರ್ಷದ ಹಳೆಯ ಶಾಲೆ ಭೂದಾನಿ ಒಬ್ಬರು ಜಮೀನು ದಾನ ಮಾಡಿ ಮಕ್ಕಳಿಗೆ ವಿಧ್ಯಾಭ್ಯಾಸ ಮಾಡಲು ಅನುವು ಮಾಡಿದ್ರು. ಆದ್ರೆ ಭೂದಾನಿ ಮಗ ಬಂದು ಶಾಲೆಯ ಜಮೀನು ಇಲ್ಲಿ ಬರಲ್ಲ ನಿಮ್ಮ ಜಮೀನು ಬೇರೆಡೆಗೆ ಬರುತ್ತೆ ಎಂದು ಶಾಲೆಯ ರಿಪೇರಿ ಕೆಲಸವನ್ನ ಸ್ಥಗಿತಗೊಳಿಸಿದ್ದಾರೆ ಪರಿಣಾಮ ಮಕ್ಕಳು ಬೀದಿಗೆ ಬಿದ್ದಿದ್ದಾರೆ.

ಶಾಲಾ ರಿಪೇರಿಗೆಂದು ತೆಗೆದ ಸರಕಾರಿ ಶಾಲೆಯನ್ನು ಜಾಗದ ಮಾಲಿಕರು ರಿಪೇರಿ ಮಾಡಲು ಬಿಡದ ಪರಿಣಾಮ ಬೀದಿಯಲ್ಲೆ ಮಕ್ಕಳು ಶಾಲೆ ಕಲಿಯುವಂತ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ನಿರ್ಮಾಣವಾಗಿದೆ. 1951 ರಲ್ಲಿ ತೋಟದ ಪ್ರದೇಶದಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ 1 ರಿಂದ 7 ನೆ ತರಗತಿ ವರೆಗೆ ಸದ್ಯ 109 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ ಒಟ್ಟು 7 ಕೊಠಡಿಗಳು ಇದ್ದು 4 ಕೊಠಡಿಗಳನ್ನ ರಿಪೇರಿ ಮಾಡಲು ತೆಗೆದಿದಿದ್ದಾರೆ ಆದ್ರೆ ಶಾಲೆಗೆ ದಾನ ಕೊಟ್ಟಿರುವ ಜಾಗದ ಮಾಲಿಕ ಮಲ್ಲಯ್ಯ ಮಠಪತಿ ಮಾತ್ರ ಶಾಲೆ ರಿಪೇರಿ ಮಾಡಲು ವಿರೋಧಸುತ್ತಿದ್ದಾರೆ.

ಮಲ್ಲಯ ಮಠಪತಿ ತಂದೆ ನಿರುಪಾದಯ್ಯ 10 ಗುಂಟೆ ಜಾಗವನ್ನ ಶಾಲೆ ನಿರ್ಮಾಣಕ್ಕೆ ದಾನ ಮಾಡಿದ್ರು 69 ವರ್ಷಗಳ ವರೆಗೂ ಶಾಲೆ ಚೆನ್ನಾಗಿಯೇ ನಡೆದಿದೆ ಶಾಲಾ ಹಂಚುಗಳು ಹಾಗೂ ಮೇಲ್ಛಾವಣಿ ಹಾಳಾದ ಹಿನ್ನಲೆ 2017 ರಲ್ಲಿ ರಿಪೇರಿ ಮಾಡಲು ತೆಗೆದ ಬಳಿಕ ಇವತ್ತಿನವರೆಗೂ ರಿಪೇರಿ ಮಾಡಲು ಬಿಡದೆ ತಕರಾರು ಮಾಡುತ್ತಿದ್ದಾರೆ. ಪರಿಣಾಮ ಮಕ್ಕಳು ಕೊಠಡಿಗಳಿಲ್ಲದೆ ಶಾಲೆ ಆವರಣದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.


ಇನ್ನು ಶಾಲೆಗೆ ಹೆಚ್ಚುವರಿಯಾಗಿ 3 ಗುಂಟೆ ಜಮೀನು ಬಂದಿದೆ ಆ ಕಾರಣಕ್ಕಾಗಿ ಜಮೀನು ಮಾಲಿಕ ಇ ರೀತಿ ಮಾಡುತ್ತಿದ್ದಾರೆ ಅನ್ನು ಮಾತುಗಳು ಕೇಳಿಬರುತ್ತಿವೆ ಇನ್ನೊಂದೆಡೆ ಜಮೀನು ಮಾಲಿಕ ಮಲ್ಲಯ್ಯ ಮಠಪತಿಯನ್ನ ಕೇಳಿದ್ರೆ ನಾವು ಜಮೀನು ಕೊಟ್ಟಿದ್ದು ನಿಜ ಆದ್ರೆ ಬೇರೆಡೆಗೆ ಜಮೀನು ನೀಡಲಾಗಿದೆ ಸರ್ಕಾರಿ ಶಾಲೆ ಇರುವ ಚೆಕಬಂದಿ ಹುಡುಕಿ ಶಾಲೆಯನ್ನ ಅಲ್ಲಿ ಕಟ್ಟಿಕೊಳ್ಳಿ. ಈಗ ಈ ಶಾಲೆ ನನ್ನ ಜಾಗವನ್ನ ಅತಿಕ್ರಮಣ ಮಾಡಿದೆ ಎನ್ನುತ್ತಾರೆ.

ಇನ್ನು ಜಮೀನು ವಿವಾದ ಬಗೆ ಹರಿಸುವಂತೆ ರಾಯಬಾಗ ತಹಶಿಲ್ದಾರಗೆ ಇಲ್ಲಿನ ಶಿಕ್ಷಕರು ಮನವಿ ಸಲ್ಲಿಸಿದರು ಯಾವುದೆ ಪ್ರಯೋಜನ ಮಾತ್ರ ಆಗಿಲ್ಲಾ ಇದುವರೆಗೂ ಬಂದು ಸಮಸ್ಯೆಯನ್ನು ಕೇಳಿಲ್ಲಾ ಎಂದು ಇಲ್ಲಿನ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಜಮೀನು ವಿವಾದಾಕ್ಕೆ ಮಕ್ಕಳು ಪರದಾಡುವಂತಾಗಿದೆ ಇನ್ನಾದ್ರು ತಹಶಿಲ್ದಾರ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.