ಅಭಿನಯ ಚಕ್ರವರ್ತಿ ಕಿಚ್ಚನಿಂದ ‘ನಾನು‌ ಮತ್ತು ಗುಂಡ’ ಚಿತ್ರಕ್ಕೆ ಅಭಿನಂದನೆ…

‘ನಾನು ಮತ್ತು ಗುಂಡ’ ಪ್ರಾಣಿ ಪ್ರಿಯರಿಗೆ ಅಚ್ಚುಮೆಚ್ಚಾದ ಸಿನಿಮಾ. ಇದೇ ಜನವರಿ 24 ರಂದು ಭರ್ಜರಿಯಾಗಿ ತೆರೆ ಕಂಡ ಸಿನಿಮಾಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಅಭಿನಂದನೆ ತಿಳಿಸಿದ್ದಾರೆ.

ಹೌದು.. ಮನುಷ್ಯ ಹಾಗೂ ಪ್ರಾಣಿ ನಡುವಿನ ಬಾಂಧವ್ಯ ಬೆಸೆಯುವ ಚಿತ್ರ ‘ನಾನು ಮತ್ತು ಗುಂಡ’. ಸಿನಿಮಾ ನೋಡಿದ ಜನ ಗುಂಡನಿಗೆ ಬಿಗ್ ಫ್ಯಾನ್ಸ್ ಆಗಿದ್ದಾರೆ.

ಅಂದ್ಹಾಗೆ ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ರಘು ಹಾಸನ್ ನಿರ್ಮಾಣದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ. ಸಂಯುಕ್ತ ಹೊರನಾಡು , ಜಿಜಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಈ ಚಿತ್ರವನ್ನ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದಾರೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.