Election 2019 : ರ್‍ಯಾಲಿ ವಿಷಯದಲ್ಲಿ ರಾಹುಲ್ ಪಿಎಂ Modi ಗಿಂತಲೂ ಮುಂದು..

ದೇಶದಲ್ಲಿ ಬೇಸಿಗೆಯ ಜೊತೆಗೆ ಚುನಾವಣೆಯ ಕಾವೂ ಸಹ ಏರುತ್ತಿದ್ದು, ಪ್ರಚಾರದ ಭರಾಟೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಮಗ್ನವಾಗಿವೆ.ಅಧಿಕಾರ ಉಳಿಸಿಕೊಳ್ಳಲಉ ಹಾಗೂ ಮರಳಿ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹರಸಾಹಸ ಪಡುತ್ತಿವೆ. ತಮ್ಮ ಸ್ಟಾರ್‍ ಪ್ರಚಾರಕರ ಮೂಲಕ ಮತದಾರರನ್ನು ತಲುಪುವ ಕೆಲಸದಲ್ಲಿ ನಿರತವಾಗಿವೆ.

ಬಿಜೆಪಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಹೇಗೋ ಹಾಗೆಯೇ ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸ್ಟಾರ್‍ ಪ್ರಚಾರಕರಾಗಿದ್ದಾರೆ.

ಅದರಲ್ಲಿಯೂ ರಾಃಉಲ್ ಗಾಂಧಿ ಅವರಂತೂ ಮುಂಚೂಣಿಯಲ್ಲಿ ನಿಂತು ಕಾಂಗ್ರೆಸ್‌ನ ರಥ ಎಳೆಯುತ್ತಿದ್ದಾರೆ ಎಂದರೆ ತಪ್ಪಲ್ಲ. ಹೀಗಾಗಿ ಎಲ್ಲೆಡೆ ಅವರ ಪ್ರಚಾರ ಸಭೆಗಳಿಗೆ ಕಾಂಗ್ರೆಸ್‌ನಲ್ಲಿ ಬೇಡಿಕೆ ಹೆಚ್ಚಿದೆ.

ಚುನಾವಣೆ ಘೋಷಣೆಯಾದ ನಂತರ ಈವರೆಗೆ ರಾಹುಲ್ ಗಾಂಧಿ ಪ್ರಚಾರದ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ಮೀರಿಸಿದ್ದಾರೆ. ಚುನಾವಣೆ ಘೋಷಣೆಯಾದ ನಂತರದ ಈ ಎರಡು ವಾರಗಳಲ್ಲಿ ದೇಶಾದ್ಯಂತ ಹೆಚ್ಚೆಚ್ಚು ಕಡೆ ರಾಹುಲ್ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ.

ಇಲ್ಲಿಯ ತನಕ ರಾಹುಲ್ ಗಾಂಧಿ ಪ್ರಚಾರದ ಸಲುವಾಗಿ 14 ಸಾವಿರ ಕಿಲೋ ಮೀಟರ್‍ ಸಂಚರಿಸಿದ್ದು, 10 ಸಮಾವೇಶಗಳನ್ನು ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಅವರು 6000 ಕಿಲೋ ಮೀಟರ್‍ ಸಂಚಾರ ಮಾಡಿದ್ದು, 6 ಸಮಾವೇಶಗಳನ್ನು ನಡೆಸಿದ್ದಾರೆ.

2014ರ ಚುನಾವಣೆಯಲ್ಲಿ ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ದೇಶಾದ್ಯಂತ ಸುಮಾರು 400 ಪ್ರಚಾರ ಸಭೆಗಳನ್ನು ನಡೆಸಿದ್ದರು. ಆದರೆ ಈ ಬಾರಿ ಪ್ರಚಾರ ಸಭೆಗಳ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಅವರನ್ನು ಹಿಂದಿಕ್ಕುವುದು ಖಚಿತವಾಗಿದೆ.

ಎಐಸಿಸಿ ಈಗಾಗಲೇ ಸಿದ್ಧಪಡಿಸಿರುವ ರೂಪುರೇಶೆಯ ಪ್ರಕಾರ ರಾಹುಲ್ ಸುಮಾರು 200 ಸಭೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮತದಾರರ ಮನಸೆಳೆಯಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ತಮ್ಮೆಲ್ಲ ಪರಿಶ್ರಮ ಹೊರಹಾಕುತ್ತಿರುವುದು ಇದರಿಂದ ಸಾಬೀತಾಗುತ್ತದೆ.

Leave a Reply