ಐಸಿಸಿ ಮಹಿಳಾ ಟಿ 20 ವಿಶ್ವಕಪ್: ಫೈನಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ

ಭಾರತೀಯ ಮಹಿಳಾ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಕ್ರಿಕೆಟ್‌ ತಂದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಭಾರತದ ಮಹಿಳಾ ತಂಡವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣೆಸಾಡಬೇಕಿತ್ತು. ಆದರೆ ಮಳೆಯ ಅಡಚಣೆಯಿಂದಾಗಿ ಮೊದಲ ಸೆಮೆಫೈನಲ್‌ ಪಂದ್ಯವನ್ನು ಅಧಿಕಾರಿಗಳು ರದ್ದುಗೊಳಿಸಿದ್ದರು.

ಭಾರತದ ತಂಡ ಎಲ್ಲಾ ಹಂತದ ಪಂದ್ಯಗಳನ್ನು ಗೆದ್ದು ವಿಜಯದ ಹಾದಿಯಲ್ಲಿ ಮುನ್ನಡೆ ಸಾಧಿಸಿತ್ತು. ಪಂದ್ಯ ರದ್ದಾದ ನಂತರವೂ ಭಾರತವು ಎದುರಾಳಿ ಇಂಗ್ಲೆಂಡ್‌ಗಿಂತ ವುಮೆನ್ ಇನ್ ಬ್ಲೂ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಇದರಿಂದಾಗಿ ಅಧಿಕಾರಿಗಳು ಭಾರತವು ಫೈನಲ್‌ನಲ್ಲಿ ಆಡಲಿದೆ ಎಂದು ಘೋಷಿಸಿದ್ದು, ಇಂಗ್ಲೆಂಡ್‌ ವಿರುದ್ಧ ಫೀಲ್ಡ್‌ಗೆ ಇಳಿಯದೆ ಫೈನಲ್‌ ಪ್ರವೇಶಿಸಿದೆ. ಭಾರತ ತಂಡದ ಇಲ್ಲಿಯವರೆಗಿನ ಆಟದ ಪ್ರದರ್ಶನವು ಈ ಬಾರಿ ಐಸಿಸಿ ಮಹಿಳಾ ಟಿ.20 ವಿಶ್ವಕಪ್‌ ಟ್ರೋಫಿ ಭಾರತಕ್ಕೆ ಸಿಗುವುದೆಂಬ ಭರವಸೆಯನ್ನು ಮೂಡಿಸಿದೆ.