ಕೇಸರಿ ಜರ್ಸಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ಆಟಗಾರರ ಭಿನ್ನ ಅವತಾರ….

ಭಾನುವಾರ ಇಂಗ್ಲೆಂಡ್ ವಿರುದ್ಧ ಭಾರತೀಯ ಆಟಗಾರರು ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇಸರಿ ಜರ್ಸಿಯಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ. ಅನೇಕ ವಿವಾದಗಳ ಮಧ್ಯೆಯೇ ಬಿಸಿಸಿಐ ಶುಕ್ರವಾರ ಕೇಸರಿ ಜರ್ಸಿ ಬಿಡುಗಡೆ ಮಾಡಿತ್ತು. ಈಗ ಈ ಜರ್ಸಿಯಲ್ಲಿ ಕೊಹ್ಲಿ, ಧೋನಿ ಮಿಂಚಿದ್ದಾರೆ.

ಬಿಸಿಸಿಐ ಅಧಿಕೃತ ಟ್ವೀಟರ್ ನಲ್ಲಿ ಕೇಸರಿ ಜರ್ಸಿ ಫೋಟೋಗಳನ್ನು ಹಂಚಿಕೊಂಡಿದೆ. ಟೀಂ ಇಂಡಿಯಾದ ಹೊಸ ಜರ್ಸಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಶುರುವಾಗಿದೆ. ಇಂಗ್ಲೆಂಡ್ ಹಾಗೂ ಭಾರತದ ಜರ್ಸಿ ಸ್ವಲ್ಪ ಒಂದೇ ಬಣ್ಣದದಲ್ಲಿತ್ತು. ಐಸಿಸಿ ಬಿಸಿಸಿಐಗೆ ಬಣ್ಣದ ಆಯ್ಕೆಗೆ ಅವಕಾಶ ನೀಡಿತ್ತು. ಬಿಸಿಸಿಐ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ನೀಲಿ ಬಣ್ಣಕ್ಕೆ ಕೇಸರಿ ಬಣ್ಣ ಹೊಂದುತ್ತಿತ್ತು. ಇದು ಮೊದಲಲ್ಲ. ಈ ಹಿಂದೆಯೂ ಈ ಬಣ್ಣ ಬಳಸಲಾಗಿದೆ. ಅಮೆರಿಕಾದಲ್ಲಿ ಕುಳಿತು ಜರ್ಸಿ ತಯಾರಿಸುತ್ತಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ನೀಲಿ ಜರ್ಸಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಕೇಸರಿ ಬಣ್ಣದ ಬಟ್ಟೆಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply