Cricket Ind vs NZ series : ಭಾರತಕ್ಕೆ 5-0 ಅಂತರದ ಐತಿಹಾಸಿಕ ಸರಣಿ ಗೆಲುವು..

ವಿದೇಶಿ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ಅಪರೂಪದ ಸರಣಿ ಜಯ ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧ ಐದನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಆತಿಥೇಯರನ್ನು ಅವರ ತವರಿನಲ್ಲಿಯೇ ಮಣ್ಣುಮುಕ್ಕಿಸಿದೆ.


ಭಾನುವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 7 ರನ್ನುಗಳಿಂದ ಜಯ ಸಾಧಿಸಿತು. ಭಾರತದ 164 ರನ್ ಸವಾಲು ಬೆನ್ನು ಹತ್ತಿದ ನ್ಯೂಜಿಲೆಂಡ್ 156 ರನ್ನುಗಳಿಗೆ ಶರಣೆಂದು ಸೋಲೊಪ್ಪಿಕೊಂಡಿತು. ಭಾರತಕ್ಕೆ ಕಿವಿ ನೆಲದಲ್ಲಿ ಇದು ಚೊಚ್ಚಲ ಸರಣಿ ಜಯವಾಗಿದೆ.

ನ್ಯೂಜಿಲೆಂಡ್ ಪರ ರಾಸ್ ಟೇಲರ್‍ 53 ಮತ್ತು ಸೀಫರ್ಟ್‌ 50 ಮಾತ್ರ ಪ್ರತಿರೋಧ ತೋರಿದರು. ಭಾರತದ ಪರ ಬುಮ್ರಾ 3 ವಿಕೆಟ್ ಪಡೆದರೆ ಶಾರ್ದುಲ್ ಮತ್ತು ಸೈನಿ ತಲಾ 2 ವಿಕೆಟ್ ಕಿತ್ತರು, ಶಿವಂ ದುಬೆ ತಾವೆಸದ ಒಂದು ಓವರಿನಲ್ಲಿ 34 ರನ್ ನೀಡಿ ದುಬಾರಿ ಎನಿಸಿದರು

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿತು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ (60), ಆರಂಭಿಕ ಕೆಎಲ್ ರಾಹುಲ್ (45) ಮತ್ತು ಶ್ರೇಯಸ್ ಅಯ್ಯರ್‍ (33 ರನ್ ಗಳಿಸಿದರು.

ರಾಹುಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (2) ಸತತ ಎರಡನೇ ಬಾರಿಗೆ ವೈಫಲ್ಯ ಅನುಭವಿಸಿದರು. ಎರಡನೇ ವಿಕೆಟ್‌ಗೆ ಜೊತೆಗೂಡಿದ ರಾಹುಲ್ ಮತ್ತು ರೋಹಿತ್ 88 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದರು.