IPL Cricket : ಆಡಲಿದ್ದಾರೆ 11 ಕನ್ನಡಿಗರು, ಈ ಬಾರಿಯೂ RCBಗೆ ಬೇಡವಾದ್ರು ಕನ್ನಡಿಗರು..

ಮುಂದಿನ ವರ್ಷದ ಐಪಿಎಲ್‌ ಆವೃತ್ತಿಗೆ ಮಿನಿ ಬಿಕರಿ ಮುಗಿದಿದ್ದು, ಮಾರ್ಚ್‌-ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಕ್ರಿಕೆಟ್ ಧಮಾಕಾದಲ್ಲಿ 11 ಮಂದಿ ಕನ್ನಡಿಗರು ವಿವಿಧ ತಂಡಗಳ ಪರ ತಮ್ಮ ಪ್ರದರ್ಶನವನ್ನು ಪಣಕ್ಕಿಡಲಿದ್ದಾರೆ.

ಈ ಹನ್ನೊಂದು ಮಂದಿ ಕನ್ನಡಿಗ ಆಟಗಾರರ ಪೈಕಿ ಹೆಚ್ಚಿನ ಸಂಖ್ಯೆಯ ಆಟಗಾರರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಲಿದ್ದಾರೆ ಎಂದು ಯಾರಾದರೂ ಅಂದಾಜಿಸಿದ್ದರೇ ಅದು ಕೇವಲ ಭ್ರಮೆಯಷ್ಟೆ ಎಂಬುದು ಕಟು ಸತ್ಯ.

ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ ಹಿಂದಿನ ಸಲದಂತೆ ಈ ಬಾರಿಯೂ ಅಧಿಕ ಸಂಖ್ಯೆಯ ಕನ್ನಡಿಗ ಆಟಗಾರರು ದೂರದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಲಿದ್ದು, ಬೆಂಗಳೂರಿನ ತಂಡವಾದರೂ ಆರ್‍ಸಿಬಿಯಲ್ಲಿ ಕೇವಲ ಇಬ್ಬರು ಕನ್ನಡಿಗರಿಗೆ ತೊರಿಕೆಯ ಅವಕಾಶ ಮಾಡಿಕೊಡಲಾಗಿದೆ.

ಪಂಜಾಬ್‌ ತಂಡದಲ್ಲಿ ಐದು ಮಂದಿ ಕನ್ನಡಿಗರು ಕಣಕ್ಕಿಳಿದರೇ ಆರ್‍ಸಿಬಿ ಮತ್ತು ರಾಜಾಸ್ಥಾನದ ಪರ ತಲಾ ಇಬ್ಬರು ಹಾಗೂ ಹೈದರಾಬಾದ್ ಮತ್ತು ಕೋಲ್ಕೊತಾ ಪರ ತಲಾ ಒಬ್ಬ ಕರ್ನಾಟಕದ ಆಟಗಾರ ತನ್ನ ಪ್ರತಿಭೆ ಒರೆಗೆ ಹಚ್ಚಲಿದ್ದಾರೆ. ಅತಿ ಹೆಚ್ಚು ಕನ್ನಡಿಗರನ್ನು ಹೊಂದಿರುವ ಪಂಜಾಬ್ ತಂಡದ ಕೋಚ್ ಸಹ ಕನ್ನಡಿಗರೇ ಆದ ಅನಿಲ್ ಕುಂಬ್ಳೆ ಆಗಿರುವುದು ಗಮನಾರ್ಹ

ಈ ಬಾರಿ ಐಪಿಎಲ್ ಹರಾಜಿನಲ್ಲಿ ಒಟ್ಟು 18 ಮಂದಿ ಆಟಗಾರರು ನೋಂದಾಯಿಸಿಕೊಂಡಿದ್ದರು. ಆದರೆ ಮಾಜಿ ಟೆಸ್ಟ್ ಆಟಗಾರ ಸ್ಟುವರ್ಟ್‌ ಬಿನ್ನಿ, ರೋಹನ್ ಕದಂ, ಶುಭಾಂಗ್ ಹೆಗಡೆ ಸೇರಿದಂತೆ ಹಲವಾರು ಮಂದಿ ಬಿಕರಿಯಾಗಲಿಲ್ಲ.

ಈ ಬಾರಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಕನ್ನಡಿಗರು ಮತ್ತು ಅವರು ಪ್ರತಿನಿಧಿಸಲಿರುವ ತಂಡಗಳು ಇಂತಿವೆ…

ಕಿಂಗ್ಸ್ ಇಲೆವೆನ್ ಪಂಜಾಬ್: ಕೆಎಲ್. ರಾಹುಲ್, ಮಾಯಂಕ್ ಅಗರ್‍ವಾಲ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಮತ್ತು ಜೆ. ಸುಚಿತ್
ರಾಯಲ್ ಚಾಲೆಂಜರರ್ಸ್‌ ಬೆಂಗಳೂರು: ದೇವದತ್ ಪಡಿಕ್ಕಲ್ ಮತ್ತು ಪವನ್ ದೇಶಪಾಂಡೆ
ರಾಜಾಸ್ಥಾನ ರಾಯಲ್ಸ್: ರಾಬಿನ್ ಉತ್ತಪ್ಪ ಮತ್ತು ಶ್ರೇಯಸ್ ಗೋಪಾಲ್
ಕೋಲ್ಕೊತಾ ನೈಟ್‌ರೈಡರ್ಸ್‌: ಪ್ರಸಿದ್ಧ ಕೃಷ್ಣ
ಸನ್‌ರೈಸರ್ಸ್‌ ಹೈದರಾಬಾದ್: ಮನೀಶ್ ಪಾಂಡ

RCB  ದೇವದತ್ ಪಡಿಕಲ್…