130 ಹೆಂಡತಿಯರ ಗಂಡ ಇನ್ನಿಲ್ಲ…

ವಿಶ್ವದಲ್ಲೇ ಅತಿ ಹೆಚ್ಚು ಮದುವೆಯಾಗಿ ದಾಖಲೆ ಬರೆದಿದ್ದ ನೈಜೀರಿಯಾದ 93ರ ಹರೆಯದ ಮೊಹಮ್ಮದ್ ಬೆಲ್ಲೋ ಅಬೂಬಕರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

ನೈಜೀರಿಯಾದ ಬಿಡಾ ರಾಜ್ಯದಲ್ಲಿ ನೆಲೆಸಿದ್ದ ಅಬೂಬಕರ್ 130 ಮಹಿಳೆಯರನ್ನು ವಿವಾಹವಾಗಿದ್ದ. ಅವರಲ್ಲಿ 10 ಪತ್ನಿಯರಿಗೆ ವಿಚ್ಛೇದನ ನೀಡಿದ್ದ. ಸದ್ಯ 97 ಹೆಂಡತಿಯರು ಅವನ ಜೊತೆಗಿದ್ದರು. ಮೂಲಗಳ ಪ್ರಕಾರ ಆತನ ಪತ್ನಿಯರಲ್ಲಿ ಕೆಲವರು ಈಗ ಗರ್ಭಿಣಿಯಾಗಿದ್ದಾರಂತೆ.

2008 ರಲ್ಲಿ ಮಸಾಬಾ ಬಹುಪತ್ನಿತ್ವದ ವಿವರಗಳನ್ನು ಡೈಲಿ ಟ್ರಸ್ಟ್‌ ಸುದ್ದಿ ಪತ್ರಿಕೆ ವರದಿ ಮಾಡಿದ ಬಳಿಕ ಆ ವಿಚಾರ ವಿಶ್ವಾದ್ಯಂತ ಭಾರೀ ಸುದ್ದಿಯಾಗಿತ್ತು. 2008 ರಲ್ಲಿ ಬಿಬಿಸಿ ವಾಹಿನಿಯೊಂದಿಗೆ ಮಾತನಾಡಿದ್ದ ಮಸಾಬಾ ‘ನಾನು ಯಾರನ್ನೂ ಕರೆದಿಲ್ಲ,ಯಾರನ್ನೂ ಹುಡುಕಿಕೊಂಡು ಹೋಗಿಲ್ಲ. ಅವರೇ ಬಂದು ನನ್ನೊಡನೆ ಬಾಳಲು ಮುಂದಾಗಿದ್ದಾರೆ. ನನಗೆ ದೇವರು ಇದನ್ನು ಮಾಡಲು ಹೇಳಿದ್ದು ನಾನು ಅವರನ್ನು ಮದುವೆಯಾಗಿದ್ದೇನೆ ಅಷ್ಟೆ.10 ಮಂದಿ ಹೆಂಡತಿಯರಿದ್ದರೆ ವ್ಯಕ್ತಿ ಸಾಯುತ್ತಾನೆ. ನನಗೆ ಇಷ್ಟು ಹೆಂಡತಿಯರನ್ನು ಸಂಭಾಳಿಸಲು ಅಲ್ಲಾಹು ಶಕ್ತಿ ನೀಡಿದ್ದಾನೆ’ ಎಂದು ತಿಳಿಸಿದ್ದರು.

ನಂತರ ಶರಿಯಾ ಕೋರ್ಟ್ ಆದೇಶದಂತೆ ಆತನನ್ನು ಬಂಧಿಸಲಾಗಿತ್ತು. ಬಳಿಕ 86 ಹೆಂಡತಿಯರ ಪೈಕಿ 82 ಮಂದಿಗೆ ವಿಚ್ಛೇದನ ನೀಡಬೇಕೆಂಬ ಷರತ್ತಿನ ಮೇರೆಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಆತ ಕೋರ್ಟ್ ಆದೇಶ ಪಾಲಿಸಲು ನಿರಾಕರಿಸಿದ್ದ. ಮತ್ತೆ ಮತ್ತೆ ಮದುವೆಯಾಗುತ್ತಲೇ ಇದ್ದ, ಅವನ ಪತ್ನಿಯರ ಸಂಖ್ಯೆ 130ಕ್ಕೆ ತಲುಪಿತ್ತು. ಅಬೂಬಕರ್ ಗೆ ಒಟ್ಟು 203 ಮಕ್ಕಳಿದ್ದಾರೆ.

Comments are closed.