ನಿರ್ಭಯಾನಂದ ಸ್ವಾಮೀಜಿ ವಿರುದ್ಧ ಕೇಳಿಬಂದ ಕಿರುಕುಳದ ಆರೋಪ : ಇದು ನಿಜಾನಾ?

ಅದು ರಾಜ್ಯದ ಪ್ರತಿಷ್ಠಿತ ಸ್ವಾಮೀಜಿ ವಿರುದ್ಧ ಕೇಳಿ ಬಂದ ಆರೋಪ, ಸ್ವಾಮೀಜಿ ಕಿರುಕುಳದ ಭಯಕ್ಕೆ ಕಣ್ಣೀರಿಟ್ಟ ಸನ್ಯಾಸಿ ಮಾತಾಶ್ರೀ. ಅಷ್ಟಕ್ಕೂ ಆ ಸ್ವಾಮೀಜಿ ಮಾಡಿದ್ದಾದರು ಏನೂ ಅ ಸನ್ಯಾಸಿನಿ ಕಣ್ಣಿರಿಟ್ಟಿದ್ದಾದರು ಏಕೆ ಅಂತಿರಾ ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತೆ.

ಅದು ರಾಜ್ಯದಲ್ಲಿ ದೊಡ್ಡದಾದ ಸೇವಾ ಆಶ್ರಮ. ಅಂತಹ ಆಶ್ರಮದ ಸ್ವಾಮೀಜಿ ವಿರುದ್ದವೆ ಹೆಣ್ಣುಮಕ್ಕಳಿಗೆ ಕಿರುಕುಳದ ಆರೋಪ ಕೇಳಿಬಂದಿದೆ ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಭಾಗ್ಯಲಕ್ಷ್ಮಿ ನಗರದಲ್ಲಿರುವ ಶ್ರೀ ಶಾರದಾದೇವಿ ಸೇವಾಶ್ರಮದ ಸನ್ಯಾಸಿನಿ ಭಕ್ತಿಮಯಿ ಮಾತಾಶ್ರೀ ಇಂತಹದೊಂದು ಗಂಭೀರ ಆರೋಪವನ್ನ ಮಾಡಿದ್ದಾರೆ, ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಅವರು ಮನಗೂಳಿ ಶಾಲೆ ಹಾಸ್ಟೆಲ್ ದಲ್ಲಿ ಹೆಣ್ಣು ಮಕ್ಕಳನ್ನ ಸರಿಯಾಗಿ ನೋಡಿಕೊಳ್ಳುತ್ತ್ತಿಲ್ಲ .ಈ ಬಗ್ಗೆ ಅವರ ಗುಟ್ಟು ರಟ್ಟು ಆಗುತ್ತದೆ ಎಂದು ಸ್ವಾಮೀಜಿ ನನಗೆ ಬೆದರಿಕೆ ಹಾಕುತ್ತಿದ್ದಾರೆ, ಗದಗ, ವಿಜಯಪುರ ಸೇರಿದಂತೆ ಹಲವು ಕಡೆಗೆ ರಾಮಕೃಷ್ಣಾಶ್ರಮದ ಶಾಖೆಗಳಿವೆ. ನಿರ್ಭಯಾನಂದ ಸ್ವಾಮೀಜಿ ಅವರ ಕ್ಯಾರೆಕ್ಟರ್ ಸರಿ ಇಲ್ಲ ಎಂದು ನಿರ್ಭಯಾನಂದ ಸ್ವಾಮೀಜಿ ವಿರುದ್ಧ ಮಾತಾಜಿ ಆರೋಪ ಮಾಡಿದ್ದಾರೆ .

ಇನ್ನು ಕೆಲವು ವರ್ಷಗಳ ಹಿಂದೆ ಅವರ ಶಿಷ್ಯೆಯಾಗಿ ರಾಮಕೃಷ್ಣಾಶ್ರಮದಲ್ಲಿ ಕಾರ್ಯನಿರ್ವಹಿಸಿದ್ದ ಮಾತಾಜಿ ಭಕ್ತಿಮಯಿ , ತಾನು 2010-12 ರ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದಲ್ಲಿ ಆಶ್ರಮಕ್ಕೆ ಸೇರಿರೋ ಲೇಡಿಸ್ ಹಾಸ್ಟೆಲ್ ನಲ್ಲಿ ಯುವತಿಯರಿಗೆ ಅನ್ಯಾಯ ಆಗುತ್ತಿತ್ತು , ಹಾಸ್ಟೆಲ್ ನಲ್ಲಿ ಸರಿಯಾದ ಬಾಗಿಲುಗಳ ವ್ಯವಸ್ಥೆ ಮಾಡಿರಲಿಲ್ಲ ರಾತ್ರಿ ಹೆಣ್ಣುಮಕ್ಕಳಿರುವ ಜಾಗಕ್ಕೆ ಗಂಡ ಮಕ್ಕಳು ಬಂದು ಮಲಗಿ ಹೋಗ್ತಾ ಇದ್ರು ಅನ್ನುವಂತಹ ಗಂಭೀರ ಆರೋಪ ಮಾಡಿದ್ರು ಮಾತಾಜಿ ಅನಾಚಾರಗಳನ್ನೆಲ್ಲ ಹೊರಗೆ ಹಾಕುತ್ತಾರೆ ಎಂಬ ಭಯದಿಂದ ನನಗೆ ಈಗ ತೊಂದರೆ ಕೊಡುತ್ತಿದ್ದಾರೆ ಚಿಕ್ಕೋಡಿಯಲ್ಲಿನ ಆಶ್ರಮ ಬಂದ್ ಮಾಡಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ನಿರ್ಭಯಾನಂದ ಸ್ವಾಮೀಜಿ ವಿರುದ್ದ ಆರೋಪಿಸಿ ಕಣ್ಣಿರಿಟ್ಟಿದ್ದಾರೆ ಮಾತಾಜಿ ಭಕ್ತಿಮಯಿ .

ಒಟ್ಟಿನಲ್ಲಿ ನಿರ್ಭಯಾನಂದ ಸ್ವಾಮೀಜಿ ವಿರುದ್ದ ಗಂಭೀರ ಆರೋಪಗಳು ಕೇಳಿ ಬಂದ್ರು ಸಹ ನಿರ್ಭಯಾನಂದ ಸ್ವಾಮೀಜಿ ಮಾತ್ರ ಯಾವುದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಾತಾಜಿ ಆರೋಪಗಳು ನಿಜಕ್ಕೂ ಸತ್ಯವಾ ಅನ್ನೋದನ್ನ ಸ್ವತಃ ಸ್ವಾಮೀಜಿಯೆ ಸ್ಪಷ್ಟಪಡಿಸಬೇಕು.