‘ಇದು ಗಣೇಶ ಉತ್ಸವದಲ್ಲಿ ಅಟಾಮ್ ಬಾಂಬ್ ಸಿಡಿಸಿದ ರೀತಿ ಇದೆ’ – ಹೆಚ್ ಡಿಕೆ

ಸರ್ಕಾರ, ಅಧಿಕಾರಿಗಳು ಜನರ ಬದುಕಿನಲ್ಲಿ ಹುಡುಗಾಟ ಆಟ ಆಡಬಾರದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ಯೋ…? ವಿಹಿಂಪ, ಆರ್ ಎಸ್ ಎಸ್ ಸರ್ಕಾರ ಇದ್ಯೋ ಅನ್ನೋ ಅನುಮಾನ ಮೂಡಿದೆ. ಈ ಸರ್ಕಾರಕ್ಕೆ ಎಲ್ಲಿಂದ ಡೈರೆಕ್ಷನ್ ಬರುತ್ತಿದೆ..? ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಕೆಲಸ ಮಾಡಬೇಕು ಎಂದು ಶೃಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಹೇಳಿದ್ದಾರೆ.

ಮಂಗಳೂರು ಸಾಗರರತ್ನ ಹೋಟೆಲ್ ಗೆ ಆಗಮಿಸಿದ ಮಾಜಿ ಸಿಎಂ ಹೆಚ್.ಡಿ.ಕೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ನನ್ನ ಭಾವನೆ ವ್ಯಕ್ತ ಪಡಿಸೋಕೆ ಇಲ್ಲಿದೆ ಬಂದಿದ್ದೇನೆ. ಮಂಗಳೂರು ನಗರದ ಒಂದು ರೀತಿಯ ಆತಂಕ ಉಂಟು ಮಾಡುವ ದಿನಗಳು ಕಾಣ್ತಿವೆ. ನಮ್ಮ ಸರ್ಕಾರ ಇದ್ದಾಗ ಶಾಂತ ರೀತಿಯಲ್ಲಿ ಇತ್ತು. ಸರ್ಕಾರ ಜನರ ಸಮಸ್ಯೆ ಗಳನ್ನ ಮರೆತು ರಾಜ್ಯದಲ್ಲಿ ಭಯ ಸೃಷ್ಟಿ ಮಾಡುವ ಪ್ರಕರಣಗಳನ್ನು ಮುಂದೆ ತರುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಶಾಂತಿ ಮೂಡ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಚರ್ಚ್ ಗಳ ಮೇಲೆ ದಾಳಿ ನಡೆದಿತ್ತು. ಸಜೀವ ಬಾಂಬ್ ವಿಚಾರ

ರಾಜ್ಯದಲ್ಲಿ ಜನತೆಗೆ ಆತಂಕ ಉಂಟು ಮಾಡುವ ಕೆಲಸ ಮಾಡಬೇಡಿ. ಕಾಲ ಹರಣ ಮಾಡದೇ ಸತ್ಯಾಸತ್ಯತೆ ನೀಡಬೇಕು. ನಿನ್ನೆ ದಿನ ಬಾಂಬ್ ನಿಷ್ರ್ಕಿಯ ಗೊಳಿಸಿರೋದು ಇಂದೇ ಮೊದಲ ಪ್ರಕರಣ.  ಇದು ಒಂದು ರೀತಿಯಲ್ಲಿ ಅಣುಕು ಪ್ರದರ್ಶನದಂತಿತ್ತು. ಈ ಸರ್ಕಾರ ಆರೂವರೆ ಕೋಟಿ ಜನರ ಸರ್ಕಾರ. ಇದು ವಿಶ್ವ ಹಿಂದುಪರಿಷತ್ ಅಥವಾ ಆರ್ ಎಸ್ ಎಸ್ ಸರ್ಕಾರ ಅಲ್ಲ.

ಅಧಿಕಾರಿಗಳು ಮುಲಾಜಿಲದೇ ಕ್ರಮ ತೆಗೆದುಕೊಳ್ಳಬೇಕು. ಯಾರನ್ನೋ ಮೆಚ್ಚಿಸೋಕೆ ಸಮಾಜದಲ್ಲಿ ಅಶಾಂತಿ ಮೂಡಿಸಬೇಡಿ. ವಾಸ್ತವವನ್ನ ಜನರ ಮುಂದೆ ಇಡಲು ಬಂದಿದ್ದೇನೆ. ಇದು ಗಣೇಶ್ ಉತ್ಸವ ದ ಅಟಾಮ್ ಬಾಂಬ್ ಸಿಡಿಸಿದ ರೀತಿಯಲ್ಲಿ ಇದೆ. ಈ ರೀತಿಯ ಪ್ರಹಸನ ಆಗಬಾರದು ಎಂದು ವ್ಯಂಗ್ಯ ಮಾಡಿದ್ದಾರೆ.