ಹರಿದ ಜೀನ್ಸ್‌, ಸ್ಲೀವ್‌ಲೆಸ್‌ ಡ್ರೆಸ್‌ಗಳಿಗೆ ಇನ್ಮುಂದೆ ಬ್ರೇಕ್!

ಮುಂಬೈನ ಕೆಲವು ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದ್ದು ಹರಿದ, ಚಿಂದಿಯಾದಂತಿರುವ ಜೀನ್ಸ್‌ ಸ್ಲೀವ್‌ಲೆಸ್‌ ಡ್ರೆಸ್‌ಗಳನ್ನು ಹಾಕಬಾರದು ಎಂದು ಕಾಲೇಜುಗಳ ನೋಟಿಸ್‌ ಬೋರ್ಡ್‌ನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾಲೇಜುಗಳು ಕೈಗೊಂಡಿರುವ  ಈ ನಿರ್ದಾರಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
jeans
ಮುಂಬೈನ ಕೆಲವೊಂದು ಪ್ರತಿಷ್ಠಿತ ಕಾಲೇಜುಗಳಾದ ಸೇಂಟ್‌ ಕ್ಸೇವಿಯರ್‌, ವಿಲ್ಸನ್‌ ಕಾಲೇಜು, ಗಿರಗಾಮ್‌ ಸೇರಿದಂತೆ ಹಲವು ಕಾಲೇಜುಗಳಲ್ಲಿ ಈ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಸಂಜೆ 7ರ ನಂತರ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಇರುವಂತಿಲ್ಲ. ಲ್ಯಾಬ್ ಹಾಗೂ ಲೈಬ್ರೆರಿಗಳಿಂದ ಹೊರಹೋಗುವಂತೆ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಲೇಜುಗಳು ನಾವು ಕಾಲೇಜಿನಲ್ಲಿ ಸಭ್ಯತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ವಿದ್ಯಾರ್ಥಿನಿಯರು ಆರು ಗಂಟೆಯ ನಂತರ ಕಾಲೇಜಿನಿಂದ ಹೊರಬರುತ್ತಾರೆ. ಅಲ್ಲದೆ ಕಾಲೇಜಿನಲ್ಲಿ ಹಲವಾರು ರೀತಿಯ ಕಾಲೇಜು ಉತ್ಸವಗಳನ್ನು ಹಮ್ಮಿಕೊಳ್ಳುತ್ತೇವೆ. ಕಾಲೇಜು ಉತ್ಸವಗಳಿಗೂ ಈ ನಿರ್ಭಂದವನ್ನು ಹೇರಲಾಗಿದೆ. ವಿದ್ಯಾರ್ಥಿಗಳು ಮಾತ್ರ ಮದ್ಯರಾತ್ರಿಯವರೆಗೂ ಎಂಜಾಯ್ ಮಾಡಿದರೆ ಹುಡುಗಿಯರು ಕಾಲೇಜಿನಿಂದ ಮನೆಗೆ ಬೇಗ ಹೋಗಿ ಎಂಬ ಆದೇಶ ತಂದಿರುವುದು ತಪ್ಪು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

Comments are closed.