Jharkhand Election : ಜಾರ್ಖಂಡಿನ ಆದಿವಾಸಿ ಜನತೆಯ ಸಂದೇಶ…

೨೦೧೯ರ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಯಲ್ಲಿ  ಜಯಭೇರಿ ಬಾರಿಸಿದ ಮೇಲೆ ಬಿಜೆಪಿ ಪಕ್ಷವು ಸರಣಿಯೋಪಾದಿಯಲ್ಲಿ ಅನುಭಸುತ್ತಿರುವ ಚುನಾವಣಾ ಹಿನ್ನೆಡಗಳಿಗೆ ಜಾರ್ಖಂಡ್ ಶಾಸನ ಸಭಾ ಚುನಾವಣಾ ಫಲಿತಾಂಶವೂ ಸೇರಿಕೊಂಡಿದೆ. ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಗಳಿಗೆ ಭಿನ್ನವಾಗಿ ಜಾರ್ಖಂಡ್ ಚುನಾವಣೆಯು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮೈತ್ರಿಕೂಟಕ್ಕೆ ನಿರ್ಣಯಾತ್ಮಕವಾದ ವಿಜಯವನ್ನು ತಂದುಕೊಟ್ಟಿದೆ. ಮತ್ತು ಆ ಮೂಲಕ ಹೊಸ ಮೈತ್ರಿಕೂಟವನ್ನು ರಚಿಸಿಕೊಳ್ಳುವ ಮೂಲಕವೋ ಅಥವಾ ಅಗತ್ಯವಿರುವಷ್ಟು ಸಂಖ್ಯೆಯನ್ನು ಗಳಿಸಿಕೊಳ್ಳುವ ಮೂಲಕವೋ ಸರ್ಕಾರವನ್ನು ರಚಿಸುವ ಯಾವ ಅವಕಾಶವನ್ನೂ ಬಿಜೆಪಿಗೆ ಇಲ್ಲದಂತೆ ಮಾಡಿದೆ. ಚುನಾವಣಾ ಪೂರ್ವದಲ್ಲಿ ಯಾವ ಮೈತ್ರಿಕೂಟವನ್ನೂ ರಚಿಸಿಕೊಳ್ಳಲಾಗದ ಬಿಜೆಪಿ ಪಕ್ಷವು ಜಾರಖಂಡ್ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಿತ್ತು. ವಾಸ್ತವವಾಗಿ ಬಿಜೆಪಿಯ ಸೋಲಿಗೆ ಇದನ್ನೇ ಪ್ರಮುಖ ಕಾರಣವಾಗಿ ಮುಂದಿಡಲಾಗುತ್ತಿದೆ. ಜೆಪಿ ಮತ್ತು ಅದರ ಈ ಹಿಂದಿನ ಮಿತ್ರಪಕ್ಷವಾದ ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟದ (ಎಜೆಎಸ್‌ಯು) ಮತಗಳಿಕೆಯ ಪ್ರಮಾಣ ೨೦೧೪ರ ಚುನಾವಣೆUಂತ ಹೆಚ್ಚಾಗಿದೆ. ಆದರೆ ಅವೆರಡೂ ಪಕ್ಷಗಳೂ ೨೦೧೪ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು ಎಂಬುದನ್ನು ಸಹ ಪರಿಗಣಿಸಬೇಕಾಗುತ್ತದೆ. ಮೇಲಾಗಿ ಮತಪ್ರಮಾಣಗಳು ಇಡೀ ರಾಜ್ಯಾದ್ಯಾಂತ ಏಕರೂಪಿಯಾUಯೇನೂ ಹರಡಿಕೊಂಡಿರುವುದಿಲ್ಲ. ಆದರೆ ಬಿಜೆಯ ಸೋಲನ್ನು ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲಾಗದ ಏಕೈಕ ಕಾರಣಕ್ಕೆ ಸೀಮಿತಗೊಳಿಸಿದರೆ ಹಿಂದಿನ ಸರ್ಕಾರದಡಿಯಲ್ಲಿ ಇದ್ದ ಸಾಮಾಜಿಕ ಸತ್ಯಗಳನ್ನು ಕಡೆಗಣಿಸಿದಂತಾಗುತ್ತದೆ. ಜಾರ್ಖಂಡ್ ರಾಜ್ಯವು ರಚನೆಯಾದಾಗಿನಿಂದಲೂ, ಯಾವೊಂದು ಪಕ್ಷಕ್ಕೂ ಬಹುಮತ ಸಿಗದಿರದಿರುವುದರಿಂದ ಆ ರಾಜ್ಯವು ಎಡಬಿಡದೆ ಅತಂತ್ರ ಸರ್ಕಾರಗಳನ್ನೂ ಮತ್ತು ಹಲವಾರು ಬಾರಿ ರಾಷ್ಟ್ರಪv ಆಡತವನ್ನೂ ಕಾಣುವಂತಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ಮಾತ್ರ ಒಂದು ಸ್ಥಿರ ಸರ್ಕಾರವನ್ನು ಕೊಟ್ಟಿತಾದರೂ ಅದರಡಿಯಲ್ಲಿ ಆ ರಾಜ್ಯದ ಅಲಕ್ಷಿತ ಸಮುದಾಯಗಳು ತೀವ್ರವಾದ ಪರಿಣಾಮಗಳನ್ನು ಎದುರಿಸಬೇಕಾಯಿತು.

ಜಾರ್ಖಂಡ್ ಜನತೆಯ ಬಹುಪಾಲು ವರ್ಗಗಳು ಮತ್ತು ಸಮುದಾಯಗಳಿಗೆ ಹೊರಹೋಗುತ್ತಿರುವ ಸರ್ಕಾರದೊಂದಿಗೆ ಸಂಬಂಧವೇ ಕುದುರಲಿಲ್ಲ. ಆದಿವಾಸಿ ವಿರೋಧಿ ಶಾಸನಗಳು, ಲಿಂಚಿಂಗ್‌ಗಳು, ಜೀವನೋಪಾಯಗಳ ಧ್ವಂಸ, ಧಾರ್ಮಿಕ ಸ್ವಾತಂತ್ರ್ಯದ ಕಾಯಿದೆ, ಜನಾಂಗೀಯ ಹಾಗೂ ಧಾರ್ಮಿಕ ನೆಲೆಯಲ್ಲಿ ಜನತೆಯ ಧ್ರೂವೀಕರಣದ ಜೊತೆಜೊತೆಗೆ ಆದಿವಾಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಭೀತಿ ಮತ್ತು ಪ್ರಭುತ್ವ ದಮನದ ವಾತಾವರಣಗಳು ಹಿಂದಿನ ಸರ್ಕಾರದ ಕಾಲಾವಧಿಯ ಪ್ರಮುಖ ಗುಣಲಕ್ಷಣಗಳಾಗಿದ್ದವು. ಇವುಗಳಲ್ಲಿ ಆದಿವಾಸಿ ವಿರೋಧಿ ಧೋರಣೆಯು ಅತ್ಯಂತ ಪ್ರಧಾನವಾಗಿತ್ತು. ಈ ಹಿಂದೆಯೂ ಜಾರ್ಖಂಡಿನಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದರೂ, ಅವ್ಯಾವುದೂ ಈಗ ಹೊರಹೋಗುತ್ತಿರುವ ಸರ್ಕಾರದಷ್ಟು ಆದಿವಾಸಿ ವಿರೋಧಿ ಧೋರಣೆಯನ್ನು ಹೊಂದಿರಲಿಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹಿಂದಿನ ಸರ್ಕಾರವು ಚೋಟಾನಾಗ್ಪುರ್ ಮತ್ತು ಸಂತಾಲ್ ಪರಗಣ ಗೇಣಿ ಕಾಯಿದೆಯನ್ನು ರದ್ದುಗೊಳಿಸುವಂತಹ ಉದ್ದೇಶವನ್ನು ಹೊಂದಿದ್ದ ಶಾಸನವನ್ನು ಪರಿಚಯಿಸಿ ಅನುಮೋದನೆ ಪಡೆದುಕೊಂಡಿತು. ಆದರೆ ಆ ಮಸೂದೆಯ ವಿರುದ್ಧ ಆದಿವಾಸಿಗಳು ಸಾಮೂಹಿಕ ಪ್ರತಿಭಟನೆಗಳನ್ನೂ ಮತ್ತು ರ್‍ಯಾಲಿಗಳನ್ನು ನಡೆಸಿದ್ದರಿಂದ ರಾಜ್ಯಪಾಲರು ಆ ಮಸೂದೆಗೆ ಸಹಿ ಹಾಕಲಿಲ್ಲ. ಆ ಎರಡೂ ಕಾಯಿದೆಗಳೂ ಆದಿವಾಸಿಗಳ ಹೋರಾಟದ ಫಲವಾಗಿದ್ದು, ಆ ಹೋರಾಟಗಳನ್ನು ನಡೆಸಿದ್ದ ಶಕ್ತಿಗಳು ಜಾರ್ಖಂಡಿನಲ್ಲಿ ಇನ್ನೂ ಸಕ್ರಿಯವಾUವೆ. ವಾಸ್ತವದಲ್ಲಿ ಆ ಎರಡೂ ಕಾಯಿದೆಗಳು ಆದಿವಾಸಿ ಅಸ್ಮಿತೆಯ ಸಾರವಾಗಿದೆ. ಆ ನಂತರ ಸರ್ಕಾರವು ಆದಿವಾಸಿಗಳಲ್ಲೇ ಒಡಕನ್ನು ಉಂಟು ಮಾಡಲು ಧಾರ್ಮಿಕ ಸ್ವಾತಂತ್ರ್ಯ ಮಸೂದೆಯನ್ನು ತಂದಿತು. ಇದರ ಜೊತೆಗೆ ಆದಿವಾಸಿ ಪ್ರದೇಶದಲಿ ತೀವ್ರವಾದ ಪ್ರಭುತ್ವ ದಮನವನ್ನು ಪ್ರಾರಂಭಿಸಿತು. ಯಾವುದೇ ಬಗೆಯ ಹಕ್ಕು ಪ್ರತಿಪಾದನೆಯನ್ನು ರಾಷ್ಟ್ರದ್ರೋಹವೆಂದು ಬಣ್ಣಿಸಲು ಪ್ರಾರಂಭಿಸಲಾಯಿತು ಮತ್ತು ಅದgಲ್ಲಿ ಭಾಗವಹಿಸಿದವರನ್ನು ದೇಶದ್ರೋಹದ ಕೇಸುಗಳಡಿ ಬಂಧಿಸಲಾಯಿತು. ಅಂಥ ಕಾಯಿದೆಯಡಿ ಈಗಲೂ ಸಾವಿರಾರು ಜನರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಹೀಗಾಗಿಯೇ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯು ಹೀನಾಯ ಸೋಲನ್ನು ಅನುಭವಿಸಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಆ ಸರ್ಕಾರದ ಧೋರಣೆ ಇನ್ನೂ ಹೀನಾಯವಾಗಿತ್ತು. ಇದು ಹೆಚ್ಚುತ್ತಿದ್ದ ಕಿರುಕುಳ ಮತ್ತು ಲಿಂಚಿಂಗ್ ಪ್ರಕರಣಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿತ್ತು ಮತ್ತು ಇದೂ ಸಹ ಬಿಜೆಪಿಯ ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮವನ್ನು ಬೀರಿತು. ಜಾರ್ಖಂಡಿನಲ್ಲಿ ಹಲವಾರು ಪಟ್ಟಣಗಳಿದ್ದು ಅಲ್ಲಿ ಹಲವಾರು ಪೂರಕ ಕೈಗಾರಿಕಾ ಘಟಕಗಳಿವೆ. ಆರ್ಥಿಕ ಇಳಿಮುಖತೆಯು ಅಂತಹ ಎಲ್ಲಾ ಘಟಕಗಳ ಮೇಲೆ ನೇರ ಪರಿಣಾಮವನ್ನು ಬೀರಿದೆ. ಹೀಗಾಗಿ ಜೆಎಂಎಂ ಮತ್ತು ಅದರ ಮಿತ್ರಪಕ್ಷಗಳು ಅರೆ ನಗರ ವಲಯಗಳಲ್ಲೂ ಉತ್ತಮ ಫಲಿತಾಂಶವನ್ನು ದಾಖಲಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಆರು ದಶಕಗಳ ಹೋರಾಟದ ಫಲವಾಗಿ ೨೦೦೦ದ ನವಂಬರ್ ೧೫ರಂದು ಜಾರ್ಖಂಡ್ ಎಂಬ ಹೊಸ ರಾಜ್ಯ ಉದಯವಾಯಿತು. ಆ ಚಳವಳಿಯ ಉದ್ದೇಶ ಒಂದು ವಿಶೇಷ ಸಾಂಸ್ಕೃತಿಕ ವಲಯವಾಗಿದ್ದ ಬಿಹಾರ್, ಪ. ಬಂಗಾಳ, ಒಡಿಶ ಮತ್ತು ಈ ಹಿಂದಿನ ಮಧ್ಯಪ್ರದೇಶಗಳಲ್ಲಿನ ಆದಿವಾಸಿ ಪ್ರದೇಶಗಳನ್ನು ಒಂದುಗೂಡಿಸಿ  ಒಂದು ಹೊಸ ರಾಜ್ಯವನ್ನು ರೂಪಿಸಬೇಕೆಂಬುದಾಗಿತ್ತು. ಆದರೆ ಅದು ಅಂತಿಮವಾಗಿ ಬಿಹಾರದ ಚೋಟಾನಾಗ್ಪುರ್ ಮತ್ತು ಸಂತಾಲ್ ಪರಗಣದ ಗುಡ್ಡಗಾಡು ಜನರ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡು ರೂಪಿತವಾಯಿತು. ಜಾರ್ಖಂಡ್ ರಾಜ್ಯವು ಉಗಮವಾಗುವ ವೇಳೆಗೆ ಆ ರಾಜ್ಯದಲ್ಲಿ ಆದಿವಾಸಿಗಳ ಜನಸಂಖ್ಯಾ ಪ್ರಮಾಣ ೧೯೫೧ರಲ್ಲಿ ಶೇ. ೩೬ರಷ್ಟಿದ್ದದ್ದು ೨೦೧೧ರ ವೇಳೆಗೆ ಶೇ.೨೬ಕ್ಕೆ ಕುಸಿದಿತ್ತು. ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿದ್ದ ಬೃಹತ್ ಪ್ರಮಾಣದ ಆದಿವಾಸಿಯೇತರರ ನೆಲೆಯೂರಿಕೆಗಳು ಸ್ವಾತಂತ್ರ್ಯಾ ನಂತರವೂ ಮುಂದುವರೆಯಿತು. ಇದು ಆದಿವಾಸಿಗಳನ್ನೇ ಅಲ್ಪಸಂಖ್ಯಾತರನ್ನಾಗಿಸಿಬಿಟ್ಟಿತು. ಹೀಗಾಗಿ ಜಾರ್ಖಂಡಿಗೆ ಬುಡಕಟ್ಟು ವಾಸಿಗಳ ರಾಜ್ಯ ಎಂಬ ಹೆಸರು ಹೊಂದುವುದೇ ಇಲ್ಲ. ಅದಕ್ಕೆ ಸಾಂಕೇತಿಕ ಅರ್ಥವೊಂದನ್ನು ಬಿಟ್ಟರೇ ಬೇರೆ ಏನೂ ಅರ್ಥವಿಲ್ಲ.

ಜಾರ್ಖಂಡ್ ರಾಜ್ಯವು ಶ್ರೀಮಂತವಾದ ಸಂಪನ್ಮೂಲವನ್ನು ಹೊಂದಿರುವ ರಾಜ್ಯವಾಗಿದ್ದು ಅದು ಅಲ್ಲಿ ಸ್ಥಾಪಿತವಾಗಿರುವ ಅಸಂಖ್ಯಾತ ಸಾರ್ವಜನಿಕ ಹಾಗೂ ಖಾಸಗಿ ಉದ್ಯಮಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತವಾಗುತ್ತದೆ. ಆದರೆ ಅದರ ಯಾವ ಲಾಭಗಳೂ ಸಹ ಅಲ್ಲಿನ ಆದಿವಾಸಿಗಳಿಗಾಗಲೀ ಅಥವಾ ಸ್ಥಳೀಯ ಜನರಿಗಾಗಲೀ ದಕ್ಕಿಲ್ಲ. ಬದಲಿಗೆ ಈ ಉದ್ಯಮಗಳಿಂದಾಗಿ ಅವರ ಬದುಕು ನಾಶವಾಗಿದೆ. ಅವರುಗಳು ಸಾಮಾಜಿಕ ಹಾಗೂ ಆರ್ಥಿಕ ಶ್ರೇಣಿಯಲ್ಲಿ ಕೊಟ್ಟಕೊನೆಯಲ್ಲೇ ಉಳಿದಿದ್ದಾರೆ. ಹೊಸ ಸರ್ಕಾರವು ಈ ವಿಪರ್ಯಾಸಗಳನ್ನು ಗಣನೆಗೆ ತೆಗೆದುಕೊಂಡು ಅಲಕ್ಷಿತ ಸಮುದಾಯಗಳನ್ನು ಒಳಗೊಳ್ಳುವ ನೀತಿಗಳನ್ನೂ ಹಾಗೂ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯ.

ಕೃಪೆ: Economic and Political Weekly

ಅನು: ಶಿವಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights