Viral : ದಾಖಲೆಯ ಸಮಯದಲ್ಲಿ ಕಂಬಳ ಓಡಿದ ಭಾರತದ ಉಸೇನ್ ಬೋಲ್ಟ್!

ಕಂಬಳ ಓಟದಲ್ಲಿ ಉಸೇನ್ ಬೋಲ್ಟ್‌ಗಿಂತಲೂ ವೇಗವಾಗಿ ಓಡಿದ ಶ್ರೀನಿವಾಸ ಗೌಡರು ಇಡೀ ದೇಶದ ಗಮನ ಸೆಳೆದಿದ್ದಾರೆ. ಗೌಡರ ಈ ಓಟವನ್ನು ದೇಶಾದ್ಯಂತ ಅನೇಕರು ಮೆಚ್ಚಿಕೊಂಡಿದ್ದು ಟ್ವಿಟರ್‌ನಲ್ಲಿ ಉಸೇನ್ ಬೋಲ್ಟ್‌ ಹೆಸರಿನ ಹ್ಯಾಶ್‌ಟ್ಯಾಗ್ ಗುಂಗು ಎಬ್ಬಿಸಿದೆ
ಕಟ್ಟಡ ಕಾರ್ಮಿಕರಾಗಿರುವ ಶ್ರೀನಿವಾಸ ಗೌಡರು 142.5 ಮೀಟರ್‌ ಕಂಬಳದ ಓಟವನ್ನು 13.62 ಸೆಕೆಂಡುಗಳಲ್ಲಿ ಕ್ರಮಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗೌಡರ ಪ್ರತಿಭೆಗೆ ತಲೆದೂಗಿದ್ದು ಆತನಿಗೆ ತರಬೇತಿ ನೀಡುವಂತೆ ಸಾಯ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಕ್ಷಿಣ ಕನ್ನಡದ ಈ ಅಪರೂಪದ ಪ್ರತಿಭೆಯ ಸಾಧನೆಯನ್ನು ಬಿಬಿಸಿ ಸೇರಿ ಅನೇಕ ಜಾಗತಿಕ ಸುದ್ದಿ ಜಾಲಗಳು ಪ್ರಮುಖವಾಗಿ ಪ್ರಕಟಸಿದ್ದರೇ ಉದ್ಯಮಿ ಆನಂದ್ ಮಹೀಂದ್ರಾ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೇರಿ ಹಲವರು ಕೊಂಡಾಡಿದ್ದಾರೆ.

ಶ್ರೀನಿವಾಸ ಗೌಡರ ಓಟವನ್ನು 100 ಮೀಟರ್‍‍ಗೆ ಎಣಿಕೆ ಮಾಡಿದಲ್ಲಿ 9.55 ಸೆಕೆಂಡುಗಳಲ್ಲಿ ಅವರು ನುರು ಮೀಟರ್ ಓಡಿರುವುದು ಸಾಬೀತಾಗಉತ್ತದೆ. ಇದು ಬೋಲ್ಟ್ ಅವರ ವಿಶ್ವ ದಾಖಲೆಗಿಂತ ಮೂರು ಸೆಕೆಂಡ್ ಕಡಿಮೆ ಇದೆ ಎಂಬುದು ಗಮನಾರ್ಹ.