ಜುಮ್ಮುವಿನಲ್ಲಿ ಕನ್ನಡಿಗ ಯೋಧ ಸಾವು : ಕುಟುಂಬಸ್ಥರ ಆಕ್ರಂದನ

ಜುಮ್ಮುವಿನಲ್ಲಿ ಕನ್ನಡಿಗ ಯೋಧ ಈಶ್ವರಪ್ಪ ಸೂರಣಗಿ (45) ಸಾವನ್ನಪ್ಪಿದ್ದಾನೆ.

ಈಶ್ವರಪ್ಪ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರ್ದವಾಡ ಗ್ರಾಮದ ಯೋಧ‌. ತಲೆಗೆ ಗುಂಡು ತಾಕಿ ಸಾವನ್ನಪ್ಪಿರುವ ಯೋಧ ಈಶ್ವರಪ್ಪ ಸೂರಣಗಿ, ಕಳೆದ 21 ವರ್ಷಗಳಿಂದ ಸಿಆರ್‌ಪಿಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು.

ಯೋಧನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾರ್ಥೀವ ಶರೀರ ನಾಳೆ ಸ್ವಗ್ರಾಮಕ್ಕೆ‌ ಬರುವ ಸಾಧ್ಯತೆ ಇದ್ದು, ಕುಂದಗೋಳ ತಹಶೀಲ್ದಾರ್ ಬಸವರಾಜ್ ಮೆಳವಂಕಿ ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.