Cricket : ನೀತಿ ಸಂಹಿತೆ ಉಲ್ಲಂಘನೆ : ರಾಯುಡುಗೆ 2 ಪಂದ್ಯಗಳ ನಿಷೇಧ ಹೇರಿದ BCCI

ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡು ಅವರ ಮೇಲೆ ಬಿಸಿಸಿಐ 2 ಪಂದ್ಯಗಳ ನಿಷೇಧವನ್ನು ಹೇರಿದೆ. ಫೆಬ್ರವರಿ 5 ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯ ಮೊದಲೆರಡು ಪಂದ್ಯಗಳಲ್ಲಿ ಹೈದರಾಬಾದ್ ಪರವಾಗಿ ಆಡದಿರುವಂತೆ ನಿಷೇಧ ಹೇರಲಾಗಿದೆ.

ಜನೆವರಿ 11 ರಂದು ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಹಾಗೂ ಹೈದರಾಬಾದ್ ನಡುವಣ ಪಂದ್ಯದ ವೇಳೆ ರಾಯುಡು ತೋರಿದ ಅನುಚಿತ ವರ್ತನೆಗೆ ನಿಷೇಧ ಹೇರಲಾಗಿದೆ. ಮೈದಾನದ ಅಂಪೈರ್ ಗಳಾದ ಅಭಿಜಿತ್ ದೇಶಮುಖ್, ಉಲ್ಲಾಸ್ ಗಾಂಢೆ ಹಾಗೂ ಥರ್ಡ್ ಅಂಪಾಯರ್  ಅನಿಲ್ ದಾಂಡೇಕರ್ ರಾಯುಡು ವಿರುದ್ಧ ಆಪಾದನೆ ಹೊರಿಸಿದ್ದರು.

 

Leave a Reply