KPCC : ನಾಯಕರಲ್ಲಿ ಒಗ್ಗಟ್ಟು ಮೂಡದಿದ್ದರೇ ಕಾಂಗ್ರೆಸ್ ಬಲವರ್ಧನೆ ಕಷ್ಟ – ಸಿದ್ದು…

ಎರಡು ದಿನಗಳ ಕಾಳ ಹೈಕಮಾಂಡ್ ಮಟ್ಟದಲ್ಲಿ ರಾಜ್ಯ ಕಾಂಗ್ರೆಸ್ ಕುರಿತು ಮಹತ್ವದ ಚರ್ಚೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ಪರಿಸ್ಥಿತಿ ಸುಧಾರಿಸದಿದ್ದರೇ ರಾಜ್ಯದಲ್ಲಿ ಪಕ್ಷದ ಬಲವರ್ಧನೆ ಕಷ್ಟಸಾಧ್ಯ ಎಂದು ತಿಳಿಹೇಳಿದ್ದಾರೆ.


ರಾಜ್ಯ ಕಾಂಗ್ರೆಸಿನಲ್ಲು ಮೂಲ ವಲಸಿಗ ೆಂಬ ಕಚ್ಚಾಟ ಅವ್ಯಾಹತವಾಗಿ ಮುಂದುವರಿದಿದೆ. ದಶಕವೇ ಕಳೆದಿದ್ದರೂ ಇನ್ನೂ ತಮ್ಮನ್ನು ಹೊರಗಿನವರಂತೆಯೇ ಕಾಣಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ವರಿಷ್ಠರ ಮುಂದೆ ಬೇಸರ ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷತೆ ಕುರಿತಾಗಿ ಮಂಗಳವಾರ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಿದ್ದ ಸಿದ್ದರಾಮಯ್ಯ ಬುಧವಾರವೂ ದಿಲ್ಲಿ ವಾಸ ಮುಂದುವರಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಗಡವೂ ಸುದೀರ್ಘ ಸಮಾಲೋಚನೆ ಮಾಡಿದರು. ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಲಿಂಗಾಯತರ ಮುಖಂಡರನ್ನು ನೇಮಿಸುವಂತೆ ಅವರು ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ೀ ಸಲಹೆಯಿಂದಾಗಿ ರೇಸಿನಲ್ಲಿ ಮುಂಚೂಣಿಯಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ ಹಿನ್ನಡೆ ಆಗಬಹುದು ಎಂದು ಹೇಳಲಾಗಿದೆಯಾದರೂ ಈಗಲೂ ಅವರೇ ಹೈಕಾಮಾಂಡಿನ ಮೊದಲ ಆಯ್ಕೆಯಾಗಿದ್ದಾರೆ ಎಂದೂ ಮೂಲಗಳು ಹೇಳುತ್ತಿವೆ.