Karnataka new govt : ಏನಾಗಬಹುದು ಗೌರಿ ಲಂಕೇಶ್ ಹತ್ಯೆಯ ತನಿಖೆ?

ಕರ್ನಾಟಕದ ಧೀಮಂತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಮಾಡಿದವರು ಸನಾತನ ಸಂಸ್ಥೆಯ ಕಾರ್ಯಕರ್ತರು ಎಂಬುದಕ್ಕೆ ಪೊಲೀಸರಿಗೆ ಸಾಕಷ್ಟು ಸಾಕ್ಷ್ಯ ಸಿಕ್ಕಿದ್ದು ಅವೆಲ್ಲವೂ ಈಗ ಚಾರ್ಜ್‍ಶೀಟ್‍ನ ಭಾಗ. ಸನಾತನ ಸಂಸ್ಥೆಗೂ ಆರೆಸ್ಸೆಸ್‍ಗೂ ಸಂಬಂಧವಿಲ್ಲ ಇತ್ಯಾದಿಗಳನ್ನು ಬಿಜೆಪಿಯವರು ಹೇಳಬಹುದಾದರೂ, ಗೌರಿಯವರ ಸಾವನ್ನು ಸಂಭ್ರಮಿಸಿದ್ದು, ಸಮರ್ಥಿಸಿದ್ದನ್ನು ಬಿಜೆಪಿಯ ಹಲವರು ಮಾಡಿದರು. ಅಂದರೆ, ಈ ಸಾವಿನ ಅಸಲೀ ಹೂರಣ ಹೊರಬರುವುದು ಅವರಿಗೆ ಬೇಕಿಲ್ಲ ಎಂಬುದು ಸ್ಪಷ್ಟ.

ಗೌರಿಯವರ ಹತ್ಯೆಗೆ ಮುಂಚೆ ನಡೆದ ಸರಣಿ ಕೊಲೆಗಳ ತನಿಖೆಗಳಲ್ಲಿ ಯಾವುವೂ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಆದರೆ, ಸಿದ್ದರಾಮಯ್ಯನವರ ಸರ್ಕಾರವು ನೇಮಿಸಿದ್ದ ಎಸ್‍ಐಟಿಯು ಗೌರಿಯವರ ಹತ್ಯೆಯ ತನಿಖೆಯನ್ನು ಅತ್ಯಂತ ದಕ್ಷತೆಯಿಂದ ನಡೆಸಿ ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿತು.

ಎಸ್‍ಐಟಿಯು ಎಷ್ಟೇ ದಕ್ಷತೆಯಿಂದ ಕಾರ್ಯನಿರ್ವಹಿಸಿ ಚಾರ್ಜ್‍ಷೀಟ್ ಹಾಕಿದರೂ ಅದನ್ನು ಕೋರ್ಟಿನಲ್ಲಿ ಮಂಡಿಸಿ ಕೆಲಸ ಮಾಡಬೇಕಾದ ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮುಖ್ಯವಾದುದು. ಈ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಸರ್ಕಾರದ ಕೈಯ್ಯಲ್ಲೇ ಇರುತ್ತದೆ. ಹಾಗಾಗಿ ಕೊಲೆಯನ್ನು ಸಮರ್ಥಿಸಿದ ಪಕ್ಷವು ಕೊಲೆಗಡುಕರಿಗೆ ರಕ್ಷಣೆ ನೀಡುವುದಕ್ಕಾಗಿ ಏನೇನು ಮಾಡಬಹುದೆಂದು ಊಹಿಸುವುದು ಕಷ್ಟವಲ್ಲ. ಹಾಗಾಗದಂತೆ ನೋಡಿಕೊಳ್ಳುವುದು ಎಲ್ಲಾ ಪ್ರಜ್ಞಾವಂತರ, ಸಂವಿಧಾನ ಪ್ರೇಮಿಗಳ ಕರ್ತವ್ಯವೂ ಆಗಿರುತ್ತದೆ.

Leave a Reply